ನಿಧನ

ಕೆದಿಲದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಗೌಡ ನಿಧನ!

ಕೆದಿಲ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಕೆದಿಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕೆಮ್ಮಾಯಿ ನಿವಾಸಿ ರವಿ ಗೌಡ ಎಂದು ಗುರುತಿಸಲಾಗಿದೆ. ಕೆದಿಲ ಹಾಗೂ ಪಾತ್ರಕೂಡಿ–ನಿತ್ತೂರು ಗಡಿಯಾರ ವ್ಯಾಪ್ತಿಯಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ…

ಚೆನ್ನೈಯಲ್ಲಿ ಕನ್ನಡದ ಕಂಪು ಪಸರಿಸಿದ ಪುತ್ತೂರಿನ ಹಿರಿಯ ಸಾಹಿತಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ನಿಧನ

ಪುತ್ತೂರು: ಚೆನ್ನೈಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಿದ್ದ ಪುತ್ತೂರಿನ ಹಿರಿಯ ಸಾಹಿತಿ, ವಿದ್ವಾಂಸ, ಅಧ್ಯಾಪಕ ಹಾಗೂ ಕನ್ನಡ ಸಂಘಟಕ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ (81) ಅವರು ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ಮುಂಜಾನೆ ಚೆನ್ನೈನ ತಮ್ಮ ನಿವಾಸದಲ್ಲಿ…

ನಿಂತಿಕಲ್ಲು ಅಜಯ್ ಫೂಟ್ ವೇರ್ ಮಾಲಕ ಅಜಯ್ ವಿಧಿವಶ

ಪಂಜ: ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೆ.30ರಂದು ಪಂಜದಿಂದ ವರದಿಯಾಗಿದೆ. ಮೃತರನ್ನು ಪಂಜದ ಕಂರ್ಬು ನಿವಾಸಿ ಸೀತಾರಾಮ ಗೌಡ ಹಾಗೂ ಉಮಾವತಿ ದಂಪತಿಯ ಪುತ್ರ ಅಜಯ್ (25) ಎಂದು ಗುರುತಿಸಲಾಗಿದೆ. ಅಜಯ್ ಅವರು ಸೆ.29ರಂದು ಹೊಟ್ಟೆ…

ಕಂಬಳ ಕ್ಷೇತ್ರದ ಲೆಜೆಂಡ್ ‘ನಂದಳಿಕೆ ಪಾಂಡು’ ಇನ್ನಿಲ್ಲ..!

ಮಣಿಪಾಲ, ಸೆ.28: ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹಾಗೂ ಹಲವು ಸಾಧನೆಗಳ ಮೂಲಕ ‘ಲೆಜೆಂಡ್’ ಎಂದೇ ಗುರುತಿಸಿಕೊಂಡಿದ್ದ ನಂದಳಿಕೆ ಪಾಂಡು ಎಂಬ ಕೋಣ ಸೋಮವಾರ (ಸೆ.28) ಮುಂಜಾನೆ ಅಸುನೀಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪಾಂಡು, ಕಂಬಳ ಕೂಟಗಳಲ್ಲಿ ತನ್ನ ವೇಗದ ಓಟ ಹಾಗೂ ವಿಭಿನ್ನ…

ಅಲಂಕಾರು ಬಳಿ ಥಾರ್-ಬೈಕ್ ಅಪಘಾತ: ಬೈಕ್ ಸವಾರ ಮೃತ್ಯು, ಚಾಲಕ ಪರಾರಿ!!

ಅಲಂಕಾರು: ವೇಗವಾಗಿ ಬಂದ ಥಾರ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅಲಂಕಾರು ಬಳಿ ನಡೆದಿದೆ. ಮೃತರನ್ನು ಅಲಂಕಾರು ನಿವಾಸಿ ಲೋಕೇಶ್ ಗೌಡ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಥಾರ್ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಳಿಕ…

ಶಿಶಿಲದಲ್ಲಿ ಪತ್ನಿಯ ಬಳಿಕ ಪತಿಯೂ ಆತ್ಮಹತ್ಯೆ: ಐದು ದಿನಗಳ ಅಂತರದಲ್ಲಿ ಎರಡು ಸಾವು

ಶಿಶಿಲ: ಮನೆಯ ಪಕ್ಕದ ಕೆರೆಯಲ್ಲಿ ಪತ್ನಿಯ ಮೃತದೇಹ ಪತ್ತೆಯಾದ ಐದು ದಿನಗಳ ಬಳಿಕ ಪತಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಶಿಲದಲ್ಲಿ ನಡೆದಿದೆ. ಗುಂಡಿಕ್ಕಾಡು ನಿವಾಸಿ ಚಿನ್ನಮ್ಮ (ಚಿತ್ರಾವತಿ) ಅವರ ಮೃತದೇಹ ಸೆ.18ರಂದು ಮನೆಯ ಪಕ್ಕದ ಜಮೀನಿನಲ್ಲಿರುವ ಕೆರೆಯಲ್ಲಿ ತೇಲುತ್ತಿರುವ…

ರಾಮಕುಂಜ: ಊಟ ಮಾಡಿ ಮಲಗಿದ್ದ ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

ರಾಮಕುಂಜ: ಊಟ ಮಾಡಿ ಮಲಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.22ರಂದು ರಾಮಕುಂಜದಲ್ಲಿ ನಡೆದಿದೆ. ಮೃತರನ್ನು ಸಚಿನ್‌ (33) ಎಂದು ಗುರುತಿಸಲಾಗಿದೆ. ಸೆ.22ರಂದು ಮಧ್ಯಾಹ್ನ ಊಟ ಮಾಡಿ ಸಚಿನ್‌ ಅವರು ಮಲಗಿದ್ದರು. ಸಂಜೆ ಸುಮಾರು 3 ಗಂಟೆಯ ವೇಳೆಗೆ ತಾಯಿ ಅವರನ್ನು ಎಬ್ಬಿಸಲು ಬಂದಾಗ ಜೋರಾಗಿ…

39ರ ಹರೆಯದ ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ

ಮೂಡುಬಿದಿರೆ: ಬಿಜೆಪಿ ಮೂಲ್ಕಿ–ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಸಕ್ರಿಯರಾಗಿದ್ದ ಯುವ ಮುಖಂಡ, ಎಕ್ಕಾರು ನಿವಾಸಿ ಪ್ರತೀಕ್ ಶೆಟ್ಟಿ (39) ಅವರು ಸೆ.22ರಂದು ನಿಧನರಾದರು. ಉದ್ಯಮಿಯಾಗಿದ್ದ ಪ್ರತೀಕ್ ಶೆಟ್ಟಿ ಅವರು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.…

ಪುತ್ತೂರು: ಮನೆಯಂಗಳದಲ್ಲಿ ವಾಹನ ತೊಳೆಯುತ್ತಿದ್ದ ಯುವಕ ವಿದ್ಯುತ್ ಶಾಕ್‌ಗೆ ಬಲಿ

ಪುತ್ತೂರು: ಮನೆಯಂಗಳದಲ್ಲಿ ಯಂತ್ರದ ಮೂಲಕ ವಾಹನ ತೊಳೆಯುತ್ತಿದ್ದ ಯುವಕನೊಬ್ಬ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶುಕ್ರವಾರ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಸಮೀಪದ ಬಡಾವು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಬಡಾವು ನಿವಾಸಿ ಈಶ್ವರ ನಾಯ್ಕ ಅವರ ಪುತ್ರ ರಕ್ಷಿತ್…

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ: ಕಡಬದ 22 ವರ್ಷದ ಯುವಕ ಮೃತ್ಯು

ಬೆಳ್ತಂಗಡಿ: ಕಟ್ಟಡ ತೆರವುಗೊಳಿಸುವ ಕಾಮಗಾರಿ ವೇಳೆ ಸಿಮೆಂಟ್‌ನ ಅವಶೇಷ ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಕಡಬ ತಾಲೂಕಿನ ಯುವ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಮೂರು ಮಾರ್ಗದ ಸಮೀಪ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಕಟ್ಟಡವನ್ನು ತೆರವುಗೊಳಿಸುವ ಕಾಮಗಾರಿ…