ಪ್ರಚಲಿತಸ್ಥಳೀಯ

ಬೆಳ್ಳಾರೆ ಪೇಟೆಯಲ್ಲಿ ಆಡಿನ ಮಂದೆ: ಮಾಲಕರಿಗೆ ದಂಡ! | ಸಾಕು ಪ್ರಾಣಿಗಳ ಮಾಲಕರಿಗೂ ನೀಡಲಾಗಿದೆ ಎಚ್ಚರಿಕೆ!!

ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್‌ ಮುಂದಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸಾಕು ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಬೆಳ್ಳಾರೆ ಗ್ರಾಮ ಪಂಚಾಯತ್‌ ಮುಂದಾಗಿದೆ.

akshaya college

ಸಾಕುಪ್ರಾಣಿಗಳನ್ನು ಬೆಳ್ಳಾರೆ ಪೇಟೆಯಲ್ಲಿ ಯಾವುದೇ ಕಾರಣಕ್ಕೂ ಅಲೆದಾಡಲು ಬಿಡದಂತೆ ಗ್ರಾ.ಪಂ. ಸೂಚನೆ ನೀಡಿತ್ತು. ಆದರೆ ನಿಯಮವನ್ನು ಉಲ್ಲಂಘಿಸಿ ಆಡುಗಳನ್ನು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್‌ ಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಆಡಳಿತ ಮುಂದಾಗಿದೆ. ಪೇಟೆಗೆ ಬಿಟ್ಟ ಆಡುಗಳನ್ನು ಗ್ರಾ.ಪಂ. ಕಟ್ಟಿ ಹಾಕಿ ಆಡಿನ ಮಾಲಕರಿಗೆ ದಂಡ ವಿಧಿಸಲಾಗಿದೆ. ಮುಂದೆಯೂ ಸೂಚನೆ ಉಲ್ಲಂಘಿಸುವುದು ಕಂಡು ಬಂದಲ್ಲಿ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಳ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಗ್ರಾ.ಪಂ. ನೀಡಿದೆ.

ಈ ಮೊದಲೇ ಪೇಟೆಯಲ್ಲಿ ಆಡುಗಳನ್ನು ಬಿಡದಂತೆ ಸೂಚನೆ ನೀಡಲಾಗಿತ್ತಾದರೂ, ಇದನ್ನು ಮೀರಿ ಮಾಲಕರು ಆಡನ್ನು ಪೇಟೆಗೆ ಬಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಅದರಂತೆ ಪೇಟೆಗೆ ಬಿಟ್ಟಿದ್ದ ಆಡನ್ನು ಕಟ್ಟಿ ಹಾಕಿ ಮಾಲಕರನ್ನು ಕರೆಸಿ ಅವರಿಗೆ ಮುಂದೆ ಆಡನ್ನು ಬಿಡದಂತೆ ಸೂಚಿಸಿ ದಂಡ ವಿಧಿಸಿ, ಆಡನ್ನು ಬಿಟ್ಟು ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಹೀಗೆಯೇ ಆಡನ್ನು ಪೇಟೆಗೆ ಬಿಡುತ್ತಿದ್ದರೆ ದಂಡದ ಮೊತ್ತ ಹೆಚ್ಚುಗೊಳಿಸಲಾಗುವುದು. ಇದರ ಬಗ್ಗೆ ಗಮನ ಹರಿಸಬೇಕೆಂದು ಆಡಿನ ಮಾಲಕರಿಗೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 123