tamanvi
ಪ್ರಚಲಿತ

ಅಕ್ಷಯ ಕಾಲೇಜಿನಲ್ಲಿ ದಿ ನೆಕ್ಸ್ಟ್ ಚಾಪ್ಟರ್ ಕೆರಿಯರ್ ಮಾರ್ಗದರ್ಶನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಮತ್ತು ವೃತ್ತಿ ಮಾರ್ಗಗಳ ಬಗ್ಗೆ ಜ್ಞಾನಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಕಾಯು ಸಂಘಟನೆ ಆಶ್ರಯದಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್` ಕೆರಿಯರ್ ಕಾರ್ಯಕ್ರಮ ಆಯೋಜಿಸಿತು.

maithri

ಕಾರ್ಯಾಗಾರ ನಡೆಸಿಕೊಟ್ಟ ಸುನೀಲ್ ಜಾರ್ಜ್ ಅವರು, ಉದ್ಯಮ – ಆಧಾರಿತ ಕೌಶಲ್ಯಗಳು, ಪ್ರಮಾಣಪತ್ರಗಳು ಮತ್ತು ಪ್ರಾಯೋಗಿಕ ತರಬೇತಿಯ ಅಗತ್ಯತೆಯನ್ನು ಒತ್ತಿ ಹೇಳಿದರು. ಯುಎಇ, ಜರ್ಮನಿ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳ ವೃತ್ತಿ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಿದರು. ತಾಂತ್ರಿಕ ಜ್ಞಾನ ಮತ್ತು ಸರಿಯಾದ ಮನೋಭಾವವು ಜಾಗತಿಕ ಅವಕಾಶಗಳನ್ನು ಗಳಿಸುವಲ್ಲಿ ಕೀ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ವಿದೇಶದಲ್ಲಿ ಅಧಿಕ ಶಿಕ್ಷಣ ಅವಕಾಶಗಳು, ಯೋಜನೆ, ಸರಿಯಾದ ಕೋರ್ಸ್ ಆಯ್ಕೆ ಮತ್ತು ಜಾಗತಿಕ ವೃತ್ತಿ ಮಾರ್ಗಗಳ ತಯಾರಿಯ ಮಹತ್ವ ಬಗ್ಗೆ ಮೌಲ್ಯಯುತ ಜಾಗೃತಿ ನೀಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಡಾ. ಅಕ್ಷಯ ಕಾರ್ಯಕ್ರಮ ಉದ್ಘಾಟಿಸಿದರು. ಹಾಸ್ಪಿಟಾಲಿಟಿ ಸೈನ್ಸ್ ವಿಭಾಗ ಮುಖ್ಯಸ್ಥ ಅವಿನಾಶ್ ಐಕ್ಯೂಎಸಿ ಸಂಯೋಜಕಿ ರಶ್ಮಿ ಉಪಸ್ಥಿತರಿದ್ದರು.

ಲಾವಣ್ಯ ಪ್ರಾರ್ಥಿಸಿದರು. ಶ್ರೇಯಸ್ ಸ್ವಾಗತಿಸಿದರು. ಪ್ರತೀಕಾ ವಂದಿಸಿದರು. ಚೇತನ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ…