ಓವರ್ ಟೇಕ್ ಮಾಡುವ ಭರದಲ್ಲಿ ಪ್ರವಾಸಿ ಬಸ್ ವಿದ್ಯಾರ್ಥಿಯೋರ್ವನನ್ನು ಬಲಿ ತೆಗೆದುಕೊಂಡ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಪ್ರಥಮ್ ಎಂದು ಗುರುತಿಸಲಾಗಿದೆ. ಕಾಲೇಜಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಘಟನೆ ನಡೆದಿದ್ದು, ಆಸ್ಪತ್ರೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.
ಗೋವಾ- ಮಂಗಳೂರು ಪ್ರವಾಸ ಮುಗಿಸಿಕೊಂಡು ಸಕ್ರೆಬೈಲಿಗೆ ಬರುತ್ತಿದ್ದ ಪ್ರವಾಸಿಗರಿದ್ದ ಬಸ್ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ.
ವಿದ್ಯಾರ್ಥಿ ಪ್ರಥಮ್ ತೀರ್ಥಹಳ್ಳಿ ತನಿಕಲ್ ಗ್ರಾಮದ ಪಾಂಡ್ಯ ಗ್ರಾಮದ ಪ್ರಥಮ ವರ್ಷ ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿ.