ದೇಶಸ್ಥಳೀಯ

ಸ್ಟಾರ್ ಕ್ರಿಕೆಟಿಗರನ್ನು ಮೀರಿಸಲಿದ್ದಾರೆಯೇ Neeraj Chopra? ಸಿಕ್ಕಾಪಟ್ಟೆ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡಿರುವ ಆಟಗಾರ!

tv clinic
ಪ್ಯಾರೀಸ್ ಒಲಿಂಪಿಕ್ಸ್'ನಲ್ಲಿ ಜಾವೆಲಿನ್ ಥ್ರೋದಲ್ಲಿ 89.45 ಮೀಟರ್ ದೂರ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ, ತನ್ನ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರೀಸ್ ಒಲಿಂಪಿಕ್ಸ್’ನಲ್ಲಿ ಜಾವೆಲಿನ್ ಥ್ರೋದಲ್ಲಿ 89.45 ಮೀಟರ್ ದೂರ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ neeraj chopra, ತನ್ನ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿಕೊಂಡಿದ್ದಾರೆ.

ಪದಕ ಗೆದ್ದ ನೀರಜ್ ಮೇಲೆ ಬಹುಮಾನದ ಸುರಿಮಳೆಯೂ ಆಗುತ್ತಿದೆ. ಇದರ ಜೊತೆಗೆ ನೀರಜ್ ಅವರ ನಿವ್ವಳ ಮೌಲ್ಯ, ಬ್ರಾಂಡ್ ಮೌಲ್ಯ ಮತ್ತು ಅನುಮೋದನೆ ಪೋರ್ಟ್‌ಫೋಲಿಯೊದಲ್ಲೂ ಸಾಕಷ್ಟು ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

akshaya college

ನೀರಜ್ ಚೋಪ್ರಾ ಅವರ ಎಂಡಾರ್ಸ್‌ಮೆಂಟ್ ಪೋರ್ಟ್‌ಫೋಲಿಯೊ ಈ ವರ್ಷ 32 ರಿಂದ 34ಕ್ಕೆ ತಲುಪಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ನೀರಜ್ ಈ ವರ್ಷ 32 ರಿಂದ 34 ಬ್ರಾಂಡ್‌ಗಳ ಬ್ರಾಂಡ್‌ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ನೀರಜ್ ಚೋಪ್ರಾ ಪ್ರಸ್ತುತ 24 ಬ್ರ್ಯಾಂಡ್‌ಗಳನ್ನು ಬ್ರಾಂಡ್‌ ಅಂಬಾಸಿಡರ್ ಆಗಿದ್ದಾರೆ. ಇದೀಗ ನೀರಜ್ 6 ರಿಂದ 8 ಹೊಸ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ದೊಡ್ಡ ವಿಷಯವೆಂದರೆ ಈ ಬ್ರ್ಯಾಂಡ್‌ಗಳು ಅಮೇರಿಕನ್ ಸ್ಪೋರ್ಟ್ಸ್ ವೇರ್ ಕಂಪನಿ ಅಂಡರ್ ಆರ್ಮರ್ ಮತ್ತು ಸ್ವಿಸ್ ವಾಚ್ ಕಂಪನಿ ಒಮೆಗಾವನ್ನು ಸಹ ಒಳಗೊಂಡಿವೆ. ಹಾಗಾಗಿ ನೀರಜ್ ಅವರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚೋಪ್ರಾ ಇದುವರೆಗೆ ತಮ್ಮ ಎಲ್ಲಾ ಒಪ್ಪಂದಗಳಿಗೆ ವಾರ್ಷಿಕವಾಗಿ ಸುಮಾರು 3 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ತೆಗೆದುಕೊಳ್ಳುತ್ತಿದ್ದರು. ಆದರೀಗ ಈ ಶುಲ್ಕ ಸುಮಾರು 4.5 ಕೋಟಿಗೆ ಏರಿಕೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯವು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಹೇಳುತ್ತದೆ. ಪ್ರಸ್ತುತ ನೀರಜ್ ಚೋಪ್ರಾ ಅವರ ಬ್ರಾಂಡ್ ಮೌಲ್ಯ 29.6 ಮಿಲಿಯನ್ ಡಾಲರ್ ಅಂದರೆ 248 ಕೋಟಿ ರೂ. ಈ ವರ್ಷದ ಅಂತ್ಯದ ವೇಳೆಗೆ ಅವರ ಬ್ರಾಂಡ್ ಮೌಲ್ಯವು 50 ಪ್ರತಿಶತದಷ್ಟು ಹೆಚ್ಚಾದರೆ ಅದು 377 ಕೋಟಿ ರೂ.ಗೆ ಏರಿಕೆಯಾಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 136