ಪುತ್ತೂರು: ನೆಹರುನಗರ ಸೀಟಿ ಗುಡ್ಡೆ ನಿವಾಸಿ ಕೃಷ್ಣಪ್ಪ ಗೌಡ ಅವರ ಪತ್ನಿ ಮೋಹಿನಿ (56 ವರ್ಷ) ಜುಲೈ 15ರಂದು ಬೆಳಿಗ್ಗೆ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಸೀಟಿಗುಡ್ಡೆ ಧನಲಕ್ಷ್ಮೀ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಾಜಿ ಅಧ್ಯಕ್ಷೆಯಾಗಿ, ಹಾಲಿ ಸದಸ್ಯೆಯಾಗಿದ್ದಾರೆ. ಅಲ್ಲದೇ, ಸೀಟಿಗುಡ್ಡೆ ಶ್ರೀದೇವಿ ನವೋದಯ ಸ್ವಸಹಾಯ ಸಂಘದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತಿ ಕೃಷ್ಣಪ್ಪ ಗೌಡ, ಪುತ್ರರಾದ ದೀಪಕ್, ಪ್ರದೀಪ್, ಕಿಶೋರ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.


























