Gl
ಸ್ಥಳೀಯ

ನಿರ್ಗತಿಕ ವೃದ್ಧರ ರಕ್ಷಣೆ: ದೀಪಶ್ರೀ ವೃದ್ಧಾಶ್ರಮಕ್ಕೆ ಸೇರ್ಪಡೆ | ಶ್ಲಾಘನೆಗೆ ಪಾತ್ರವಾದ ರೋಟರಿ ಯುವದ ಕಾರ್ಯ

ಎಪಿಎಂಸಿ ಪ್ರಾಂಗಣದ ಬಸ್ಸು ತಂಗುದಾಣದಲ್ಲಿ ಕಳೆದ ಹಲವಾರು ದಿನಗಳಿಂದ ಇದ್ದ ಸುಮಾರು 70 ವರ್ಷ ವಯೋಮಾನದ ವೆಂಕಪ್ಪ ಶೆಟ್ಟಿ ಅವರನ್ನು ಜಿಡೆಕಲ್ಲಿನಲ್ಲಿನ ದೀಪಶ್ರೀ ವೃದ್ಧರ ಹಾಗೂ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಎಪಿಎಂಸಿ ಪ್ರಾಂಗಣದ ಬಸ್ಸು ತಂಗುದಾಣದಲ್ಲಿ ಕಳೆದ ಹಲವಾರು ದಿನಗಳಿಂದ ಇದ್ದ ಸುಮಾರು 70 ವರ್ಷ ವಯೋಮಾನದ ವೆಂಕಪ್ಪ ಶೆಟ್ಟಿ ಅವರನ್ನು ಜಿಡೆಕಲ್ಲಿನಲ್ಲಿನ ದೀಪಶ್ರೀ ವೃದ್ಧರ ಹಾಗೂ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು.

Pashupathi

ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅವರು ರೋಟರಿ ಕ್ಲಬ್ ಪುತ್ತೂರು ಯುವ ಇದರ ಪೂರ್ವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಪುತ್ತೂರು ಉಮೇಶ್ ನಾಯಕ್ ಅವರು ಪೋಲಿಸ್ ಇಲಾಖೆಯ ಸಹಕಾರದಿಂದ ಹಿರಿಯ ನಾಗರಿಕರನ್ನು ರಕ್ಷಿಸಲಾಯಿತ.

akshaya college

ಪೋಲಿಸ್ ವಿಚಾರಣೆಯ ವೇಳೆ ವೆಂಕಪ್ಪ ಶೆಟ್ಟಿ ಅವರು ಪುಣಚ ನಿವಾಸಿ ಎಂದು ತಿಳಿದು ಬಂದಿದ್ದು, ಅವರ ಪತ್ನಿಯು ಮೃತ ಪಟ್ಟಿದ್ದಾರೆ. ಇವರು ಪುಷ್ಪ ಹಾಗೂ ಭವಾನಿ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಹಾಗೂ ಇಬ್ಬರಿಗೂ ವಿವಾಹವಾಗಿದೆ ಎಂದು ತಿಳಿದುಬಂದಿದೆ.

ಪುಣಚ ಗ್ರಾಮಸ್ಥರಲ್ಲಿ ವಿಚಾರಿಸುವಾಗ ಈ ವೃದ್ಧರು ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಮನೆಯವರ ಸಂಪರ್ಕ ದಿಂದ ದೂರವಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಪಿಎಂಸಿ ಮಾರುಕಟ್ಟೆಯ ಸ್ಥಳೀಯ ನಿವಾಸಿಯೊಬ್ಬರ ಪ್ರಕಾರ ಈ ವೃದ್ಧರು ಕಳೆದ ಐದು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಇದೇ ಬಸ್ಸು ತಂಗುದಾಣದಲ್ಲಿ ವಾಸವಾಗಿರುತ್ತಾರೆ ಎಂದು ತಿಳಿದುಬಂದಿದೆ.

ವೃದ್ಧರ ರಕ್ಷಣೆ ಮಾಡುವ ಕಾರ್ಯದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಕೃಷ್ಣಪ್ಪ, ಹನುಮಂತ, ಶಿವಪ್ರಸಾದ್ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…