ದೇಶವಿಶೇಷಸ್ಥಳೀಯ

ಮಧ್ಯಾಹ್ನದ ಹೊತ್ತು, ಸಿಬ್ಬಂದಿಗಳಿಲ್ಲದ ಬ್ಯಾಂಕ್!! ಗ್ರಾಹಕರೊಬ್ಬರು ಮಾಡಿದ್ದೇನು ಗೊತ್ತೇ? ಊಟದ ವಿರಾಮದ ಬಗ್ಗೆ ಸ್ಪಷ್ಟನೆ ನೀಡಿದ ಎಸ್.ಬಿ.ಐ.

ಈ ಸುದ್ದಿಯನ್ನು ಶೇರ್ ಮಾಡಿ

ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಮಧ್ಯಾಹ್ನ 1.30 ಇಲ್ಲವೇ 2 ಗಂಟೆ ಆಗುತ್ತಿದ್ದಂತೆ ಯಾವೊಬ್ಬ ಸಿಬ್ಬಂದಿಯೂ ಬ್ಯಾಂಕ್ ವ್ಯವಹಾರಕ್ಕೆ ಸಿಗುವುದಿಲ್ಲ. ಕೇಳಿದರೆ ಊಟದ ಸಮಯ ಅಂತ ಹೇಳುತ್ತಾರೆ. ಹಣವನ್ನು ಡೆಪಾಸಿಟ್ ಮಾಡಲು ಗ್ರಾಹಕರು ಕ್ಯೂನಲ್ಲಿ ನಿಂತಿದ್ದರೂ ಕ್ಯಾಷ್ ಕೌಂಟರ್‌ನಲ್ಲಿರುವ ಸಿಬ್ಬಂದಿ ಟೈಮ್ ಆಯ್ತು ಊಟ ಮಾಡಬೇಕು, ಆ ಮೇಲೆ ಬನ್ನಿ ಅಥವಾ ಕಾಯಿರಿ ಅಂತ ಹೇಳಿ ಅಲ್ಲಿಂದು ಎದ್ದುಹೋಗುವುದನ್ನು ನೋಡಿರುತ್ತೇವೆ. ಹಿರಿಯರನ್ನು ಲೆಕ್ಕಿಸದೆ ಹೀಗೆ ವರ್ತಿಸುವುದನ್ನು ನೋಡಿರುತ್ತೇವೆ. ಕೆಲವರ ಅನುಭವಕ್ಕೂ ಇಂತಹ ಸನ್ನಿವೇಶಗಳು ಬಂದಿರುತ್ತವೆ. ಆದರೆ ಇಲ್ಲೊಂದು ಘಟನೆಯ ಬಳಿಕ ಬ್ಯಾಂಕ್ ಸಿಬ್ಬಂದಿಯ ಊಟದ ಸಮಯ ಯಾವುದು (Bank Lunch Time) ಅನ್ನೋ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಎಸ್‌ಬಿಐ ಸ್ಪಂದಿಸಿದೆ.

ಇತ್ತೀಚೆಗೆ ವ್ಯಕ್ತಿಯೊಬ್ಬರು ಖಾಲಿ ಖಾಲಿಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮಧ್ಯಾಹ್ನ 3 ಗಂಟೆಗೆ ಸಮಯ, ಇಡೀ ಸಿಬ್ಬಂದಿ ಊಟಕ್ಕೆ ಹೋಗಿದ್ದಾರೆ. ಒಂದು ಕಡೆ ಸಿಬ್ಬಂದಿಗೆ ಊಟದ ಸಮಯ ಇಲ್ಲ ಎಂದು ಎಸ್‌ಬಿಐ ಹೇಳುತ್ತೆ, ಮತ್ತೊಂದೆಡೆ ಇಡೀ ಸಿಬ್ಬಂದಿ ಊಟಕ್ಕೆ ಹೋಗಿದ್ದಾರೆ. ಪ್ರೀತಿಯ ಎಸ್‌ಬಿಐ ಇಡೀ ಜಗತ್ತೇ ಬದಲಾಗಿದೆ. ಆದರೆ ನೀವು ಯಾಕೆ ಎಂದು ಫೋಟೊಗೆ ಅಡಿಬರಹವನ್ನು ಬರೆದಿದ್ದಾರೆ.

SRK Ladders

ವ್ಯಕ್ತಿಯ ಈ ಪೋಸ್ಟ್‌ಗೆ ಎಸ್‌ಬಿಐ ಪ್ರತಿಕ್ರಿಯಿಸಿದ್ದು, ತಕ್ಷಣವೇ ಪೋಟೊವನ್ನು ಡಿಲೀಟ್ ಮಾಡುವಂತೆ ಕೇಳಿದೆ. ಆ ನಂತರ ವ್ಯಕ್ತಿ ಹಂಚಿಕೊಂಡಿದ್ದ ಫೋಟೊವನ್ನು ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಆದರೂ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿದೆ.

ಎಕ್ಸ್‌ ಮೂಲಕವೇ ಪ್ರತಿಕ್ರಿಯಿಸಿರುವ ಎಸ್‌ಬಿಐ, ಆಡಚಣೆಗಾಗಿ ವಿಷಾದಿಸುತ್ತೇವೆ. ಆದರೆ ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ವ್ಯಾಪ್ತಿಯಲ್ಲಿ ಫೋಟೊ ಅಥವಾ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಹೀಗಾಗಿ ಫೋಟೊವನ್ನು ಕೂಡಲೇ ತೆಗೆದುಹಾಕಿ ಎಂದು ಹೇಳಿದೆ.

ಬ್ಯಾಂಕ್ ಸಿಬ್ಬಂದಿಯ ಕುರಿತು ಗ್ರಾಹಕರೊಬ್ಬರ ದೂರು ಹಾಗೂ ಎಸ್‌ಬಿಐ ನಡುವಿನ ಚರ್ಚೆಯ ಫೋಟೊಗಳು ವೈರಲ್ ಆಗಿದೆ. ಇದರಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಎಸ್‌ಬಿಐ ಶಾಲೆಯಲ್ಲಿ ಇಡೀ ಸಿಬ್ಬಂದಿ ಊಟಕ್ಕಾಗಿ ಹೊರಗೆ ಹೋಗಿದ್ದರು ಎಂದು ಬಳಕೆದಾರರು ದೂರುತ್ತಾರೆ. ಇದು ಯಾವ ಶಾಖೆ ಎಂದು ಕೇಳುವ ಬದಲು, ಎಸ್‌ಬಿಐ ಆ ಫೋಟೊವನ್ನು ತಕ್ಷಣ ತೆಗೆದುಹಾಕಿ ಎಂದು ಕೇಳಿದೆ ಎಂದು ಹಾಸ್ಯದ ದಾಟಿಯಲ್ಲಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್ 2.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದಿದ್ದು, ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 4,600 ಲೈಕ್ ಗಳನ್ನು ಗಳಿಸಿದೆ. ಹಂಚಿಕೆಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.

“ಅವರು ಊಟದ ವಿರಾಮದ ಸಮಯವನ್ನು ಏಕೆ ಘೋಷಿಸುವುದಿಲ್ಲ? ನಾವು ಅದಕ್ಕೆ ಅನುಗುಣವಾಗಿ ಯೋಜಿಸಬಹುದು. ಖಾಸಗಿ ಬ್ಯಾಂಕಿನಲ್ಲಿಯೂ ನನಗೆ ಈ ಸಮಸ್ಯೆ ಇತ್ತು – ಅಲ್ಲಿ ನಾನು ಭೇಟಿಯಾಗಬೇಕಾದ ವ್ಯಕ್ತಿ ಊಟದ ವಿರಾಮದಲ್ಲಿದ್ದರು ಮತ್ತು ನಾನು ಸ್ವಲ್ಪ ಸಮಯ ಕಾಯಬೇಕಾಯಿತು” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಭದ್ರತಾ ಕಾರಣಗಳಿಗಾಗಿ? ಅವರು ಏನನ್ನು ನಿರ್ಮಿಸುತ್ತಿದ್ದಾರೆ – ರಾಕೆಟ್‌ಗಳು?” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ತಕ್ಷಣ’ ತನ್ನದೇ ಆದ ಪ್ರತ್ಯೇಕ, ವಿಶೇಷ ಟ್ವೀಟ್ ಪಡೆಯುವುದು ಪ್ರಭಾವಶಾಲಿ ಪವರ್‌ಪ್ಲೇ ಆಗಿದೆ” ಎಂದು ನಾಲ್ಕನೇ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.

“ಸರಿ, ವಾಸ್ತವವಾಗಿ, ಆ ವ್ಯಕ್ತಿ ಕಾನೂನನ್ನು ಉಲ್ಲಂಘಿಸಿದ್ದಾನೆ. ಬ್ಯಾಂಕ್ ಆವರಣದ ಪೋಟೊ, ವಿಡಿಯೊಗೆ ಅನುಮತಿ ಇಲ್ಲ. ಆ ವ್ಯಕ್ತಿ ಪೋಟೊವನ್ನು ಡಿಲೀಡ್ ಮಾಡಬೇಕು” ಎಂದು ಐದನೆಯವನು ವಾದಿಸಿದ್ದಾರೆ. ಹೀಗೆ ಹಲವಾರು ನೆಟ್ಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ಊಟದ ಸಮಯ ಇದೆಯಾ ಎಂಬುದಕ್ಕೆ ಎಸ್‌ಬಿಐ ಪ್ರತಿಕ್ರಿಯಿಸಿದ್ದು, ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗೆ ಊಟಕ್ಕೆ ನಿರ್ದಿಷ್ಟವಾದ ಸಮಯ ಇಲ್ಲ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಗ್ರಾಹಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3