ಸ್ಥಳೀಯ

ಪಂಪ್ ಆಪರೇಟರ್ ದೀಕ್ಷಿತ್ ಮರಿಕೆ ನಿಧನ | ಅಂತಿಮ ನಮನ ಸಲ್ಲಿಸಿದ ಮಠಂದೂರು, ಪುತ್ತಿಲ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ನಿವಾಸಿ ದಿ. ಗೋಪಾಲ ಗೌಡ ಅವರ ಪುತ್ರ, ಬಿಜೆಪಿ ಸಕ್ರೀಯ ಕಾರ್ಯಕರ್ತ, ಆರ್ಯಾಪು ಗ್ರಾಮ ಪಂಚಾಯತ್ ಪಂಪ್ ಆಪರೇಟರ್ ದೀಕ್ಷಿತ್ ಮರಿಕೆ (28 ವ.) ಮೇ 29ರಂದು ರಾತ್ರಿ ಅಸೌಖ್ಯದಿಂದ ನಿಧನರಾದರು.

ಕೆಲ ದಿನಗಳಿಂದ ಅಸೌಖ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದರು.

SRK Ladders

ಮೃತರು ತಾಯಿ ರುಕ್ಮಿಣಿ, ಸಹೋದರ ಶರತ್ ಗೌಡ, ಸಹೋದರಿ ಅಕ್ಷತಾ ಮುಕುಂದ ಹಿರಿಯಡ್ಕ ಅಗಲಿದ್ದಾರೆ.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಬೂಡಿಯಾರ್ ರಾಧಾಕೃಷ್ಣ ರೈ, ರಾಜೇಶ್ ಬನ್ನೂರು, ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಸಾಮೆತ್ತಡ್ಕ, ಆರ್ಯಾಪು ಗ್ರಾಪಂ ಸದಸ್ಯ ಯತೀಶ್ ದೇವ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3