ಸ್ಥಳೀಯ

ಪೊಲೀಸ್ ಠಾಣೆಗೇ ಕನ್ನ!! ಬೀರುವಿಗೆ ಹಾನಿಯಾಗದಂತೆ ಲಕ್ಷ ಲಕ್ಷ ದುಡ್ಡು ಕಳ್ಳತನ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಡೋಲು ಪಟ್ಟಣದ ಟೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

core technologies

ಬೀರುವಿನ ಲಾಕರ್‌ಗಳಲ್ಲಿ ಇರಿಸಲಾಗಿದ್ದ 5.63 ಲಕ್ಷ ರೂ ನಾಪತ್ತೆಯಾಗಿದೆ. ಲಕ್ಷ ಲಕ್ಷ ನಗದು ನಾಪತ್ತೆಯಾಗಿದ್ದರೂ ಕೂಡ ಬೀರುವಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಬೀಗಗಳು ಇದ್ದಂತೆಯೇ ಇದ್ದುದ್ದರಿಂದ ಇದು ಹೊರಗಿನವರ ಕೆಲಸವಲ್ಲ. ಠಾಣೆಯ ಒಳಗಿನವರ ಕೆಲಸ ಎಂದು ಸ್ಪಷ್ಟವಾಗಿದೆ. ಈ ವೇಳೆ ತನಿಖೆ ನಡೆಸಿದಾಗ ಬೀರುವಿನಲ್ಲಿದ್ದ ಹಣವನ್ನು ಗೃಹರಕ್ಷಕ ದಳದ ಸಿಬ್ಬಂದಿಯೇ ಕದ್ದಿರುವುದು ಬೆಳಕಿಗೆ ಬಂದಿದೆ.

akshaya college

ಬಹಳ ನಂಬಿಕಸ್ಥನಾಗಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್. ವಿವಿಧ ಪ್ರಕರಣಗಳಲ್ಲಿ ಸಿಕ್ಕ ನಗದನ್ನು ನೋಡಿಕೊಳ್ಳಲು ಮನೋಜ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ 5.63 ಲಕ್ಷ ರೂ ದೋಚಿ ತನಗೇನೂ ಗೊತ್ತಿಲ್ಲದವರಂತೆ ಪೊಲೀಸ್ ಠಾಣೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದರು.

ಆದರೆ ಬೀರುವಿನಲ್ಲಿದ್ದ ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಪೊಲೀಸರನ್ನು ಕಾಡತೊಡಗಿದೆ. ಇದಾದ ಬಳಿಕ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್ ನನ್ನು ವಶಕ್ಕೆ ಪಡೆದಿದ್ದು, ತಾನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಆತನಿಂದ 3 ಲಕ್ಷ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ರಿಮಾಂಡ್‌ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118