ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿ ಚೇಡವು ಅಯ್ಯಪ್ಪ ಸ್ವಾಮಿಯ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟಾಯ್ಲೆಟ್, ಬಾತ್ ರೂಮ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಗೊಂಡ 50,000 ರೂ.ನ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅರಿಯಡ್ಕ ವಲಯದ ಮೇಲ್ವಿಚಾರಕರಾದ ಹರೀಶ್ ಕುಲಾಲ್ ಸಮಿತಿಯ ಪದಾಧಿಕಾರಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಲ , ಸಮಿತಿಯ ಅಧ್ಯಕ್ಷರಾದ ಅಣ್ಣಯ್ಯ ಗೌಡ, ಗೌರವ ಅಧ್ಯಕ್ಷ ಪ್ರವೀಣ್ ರೈ ಮೇನಾಲ , ಆಡಳಿತ ಸಮಿತಿಯ ಚಂದ್ರಶೇಖರ್ , ಪ್ರತಿನ್ ತಲೆಬೈಲ್ , ರವಿ ಬೆಳ್ಳಿಚ್ಚೇಡವು , ಶೀನಪ್ಪ, ಬೆಳ್ಳಿಚೆದವು , ಶ್ರೀಮತಿ ಶ್ಯಾಮಲ ಬೆಳ್ಳಿ ಚೆದವು ,ಒಕ್ಕೂಟದ ಉಪದ್ಯ ಕ್ಷರಾದ ಶ್ರೀಮತಿ ಸರಸ್ವತಿ , ಕಾರ್ಯದರ್ಶಿಯಾದ ಶೀನ ಸಜಂಕಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಎಲ್ಲರನ್ನು ಗೌರವ ಅಧ್ಯಕ್ಷ ರಾದ ಪ್ರವೀಣ್ ರೈ ಸ್ವಾಗತಿಸಿದರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಸುಂದರ್ ಜಿ ವಂದಿಸಿದರು.