ರಾಜ್ಯ ವಾರ್ತೆಸ್ಥಳೀಯ

ಬ್ಯಾಂಕ್‌ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ಕಿಲಾಡಿ ಕಳ್ಳಿ! ಲ್ಯಾಪ್’ಟಾಪ್ ಕಳ್ಳತನದಲ್ಲಿ ಚಾಲಾಕಿ ಕೈಚಳಕ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಎಚ್‌ಎಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಲಾಡಿ ಕಳ್ಳಿಯನ್ನು ಬಂಧಿಸಿದ್ದಾರೆ.

akshaya college

ಹೋಟೆಲ್, ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು ಜೆಸ್ಸಿ ಅಗರ್ ವಾಲ್ ಎಂಬಾಕೆ ಕದಿಯುತ್ತಿದ್ದಳು.

ಹೋಟೆಲ್, ಪಿಜಿಗಳಲ್ಲಿ ರೂಂ ಪಡೆಯುವ ಈ ಖತರ್ನಾಕ್‌ ಲೇಡಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಳು. ಹೋಟೆಲ್‌ ಹಾಗೂ ಪಿಜಿಯಲ್ಲಿರುವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು.

ಇನ್ನೂ ಈಕೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲಸ ಬಿಟ್ಟು ಕೋರಮಂಗಲ, ಇಂದಿರಾನಗರ, ಎಚ್‌ಎಎಲ್ ಸುತ್ತಮುತ್ತ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬಂಧಿತಳಿಂದ 10 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಸೀಜ್ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪಿಜಿಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೋರಮಂಗಲ, ಎಚ್ಎಎಲ್, ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದಾಳೆ. ಪಿಜಿಯಲ್ಲಿದ್ದವರು ತಿಂಡಿ, ಕಾಫಿಗೆ ಹೋದಾಗ ತನ್ನ ಕೈಚಳಕ ತೋರುತ್ತಿದ್ದಳು.

ಜೆಸ್ಸಿ ಅಗರ್ ವಾಲ್ ಮೂಲತಃ ರಾಜಸ್ಥಾನದವಳು. ಈ ಮುಂಚೆ ಬ್ಯಾಂಕ್‌ವೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು. ನಂತರ ಲ್ಯಾಪ್ ಟಾಪ್ ಕಳ್ಳತನಕ್ಕೆ ಇಳಿದಿದ್ದಳು. ಆಕೆಯನ್ನ ಬಂಧಿಸಿ 24 ಲ್ಯಾಪ್ ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 130