ಕರಾವಳಿಸ್ಥಳೀಯ

ದಾಸ್ತಾನಿರಿಸಿದ್ದ 40 ಕೆ.ಜಿ ಗಾಂಜಾ ದೃಢಪಡಿಸಿದ ರಾಸಾಯನಿಕ ವಿಧಿ ವಿಜ್ಞಾನ ಪ್ರಯೋಗಾಲಯ! ಆರೋಪ ಸಾಬೀತಿಗೆ ಪ್ರಾಸಿಕ್ಯೂಷನ್ ವಿಫಲ: 3 ಆರೋಪಿಗಳು ಖುಲಾಸೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಅಕ್ರಮವಾಗಿ 40 ಕೆಜಿ ಗಾಂಜಾ ದಾಸ್ತಾನು ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

chennai-shopping
maithri

ಖುಲಾಸೆಗೊಂಡ ಆರೋಪಿಗಳು ಅಹಮದ್ ಸಾಬೀತ್, ಅದ್ದು ಯಾನೆ ಅಬ್ದುಲ್ ಖಾದರ್, ಮಹಮ್ಮದ್ ಅನ್ಸಾರ್.

2020ರ ಅ. 8ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮದ್ದ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಮೂರು ಆರೋಪಿಗಳು ಕಾಂತಡ್ಕ ನಿವಾಸಿ ಮೊಹಮ್ಮದ್ ಇರ್ಷಾದ್ ಎಂಬಾತನ ಹಣಕಾಸಿನ ನೆರವಿನಿಂದ ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಇರಿಸಿಕೊಂಡಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಖರೀದಿಸಿ ತಂದಿದ್ದ ಈ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಲಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅವಿನಾಶ್ ಎಚ್ ಗೌಡ ಅವರು ಜೆ ಎಂ ಎಫ್ ಸಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳ ಮೂಲಕ ದಾಳಿಯನ್ನು ನಡೆಸಿದ್ದರು.

ಆರೋಪಿ ಅಹಮದ್ ಸಾಬೀತ್ ನನ್ನು ಬಂಧಿಸಿ ಸುಮಾರು 39.948 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಈ ಸಂದರ್ಭದಲ್ಲಿ ಇನ್ನೋರ್ವ ಆರೋಪಿ ಮೊಹಮ್ಮದ್ ಅನ್ಸಾರ್ ತಪ್ಪಿಸಿಕೊಂಡಿರುತ್ತಾನೆ. ಅದರ ನಂತರ ಮತ್ತೋರ್ವ ಆರೋಪಿ ಅದ್ದು ಯಾನೆ ಅಬ್ದುಲ್ ಖಾದರ್ ನನ್ನು ವಶಕ್ಕೆ ಪಡೆದು ಆತನಿಂದ 38 ಗ್ರಾಂ ಗಾಂಜಾ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದೆ. ವಶಪಡಿಸಿಕೊಂಡ ವಸ್ತುವನ್ನು ರಾಸಾಯನಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಯಲ್ಲಿ ಗಾಂಜಾ ಎಂದು ದೃಢಪಟ್ಟಿದೆ. ಆದರೆ ಈ ಪ್ರಕರಣದಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಪ್ರಕಾರ ಸರಿಯಾದ ಕ್ರಮವನ್ನು ಅನುಸರಿಸಲಿಲ್ಲ ಹಾಗೂ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರೊಸಿಕ್ಯುಷನ್ ವಿಫಲವಾಗಿದೆ ಎಂದು ಮನಗಂಡು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಎಂ ಜೋಶಿ ಅವರು ಪ್ರಕರಣದ ಮೂರು ಆರೋಪಿಗಳನ್ನು ಖುಲಾಸಿಗೊಳಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ಅದ್ದು ಯಾನೆ ಅಬ್ದುಲ್ ಖಾದರ್ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ನ ವಕೀಲರಾದ ಓಮರ್ ಫಾರೂಕ್ ಮುಲ್ಕಿ, ಆಶ್ರಫ್ ಅಗ್ನಡಿ, ಮಹಮ್ಮದ್ ಅಸ್ಗರ್ ಮುಡಿಪು, ಹೈದರ್ ಕಿನ್ನಿಗೋಳಿ ವಾದ ಮಂಡಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…

1 of 163