Gl
ಸ್ಥಳೀಯ

ಹಿರಿಯರ ಸಂಸ್ಮರಣೆ ಪುಣ್ಯ ಕಾರ್ಯ | ಬಾರ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಯ್ಯೂರು ನಾರಾಯಣ ಭಟ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವೈದಿಕರಾಗಿ ಮತ್ತು ತಂತ್ರಿಗಳಾಗಿದ್ದು ಸಮಾಜದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದ್ದ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆ ಜೊತೆಗೆ ಕಳೆದ 27 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುತ್ತಾ ಇರುವುದು ನಿಜವಾಗಿಯೂ ಪುಣ್ಯದ ಕಾರ್ಯವೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು.

Pashupathi

ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ವಿಷ್ಣು ಕುಮಾರ ನಿಲಯದಲ್ಲಿ ಪುತ್ತೂರು ಪರ್ಲಡ್ಕದ ಬಾರ್ಯ ಪ್ರತಿಷ್ಠಾನದ ವತಿಯಿಂದ ಜರಗಿದ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

akshaya college

ಸಮಾರಂಭದಲ್ಲಿ ವೇದಮೂರ್ತಿ ಪಚ್ಚಡಿಬೈಲು ಸುಬ್ರಹ್ಮಣ್ಯ ತಂತ್ರಿ ಅವರಿಗೆ ಬಾರ್ಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸುಬ್ರಹ್ಮಣ್ಯ ತಂತ್ರಿ ಕೃತಜ್ಞತೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಬಾರ್ಯ ಪ್ರಶಾಂತ್ ಕುಮಾರ್ ಬುನ್ನು ಮಾತನಾಡಿ, ವಿಷ್ಣುಮೂರ್ತಿ ನೂರಿತ್ತಾಯರ ಕೊಡುಗೆಗಳನ್ನು ಸ್ಮರಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ, ಆರಂಭದಲ್ಲಿ ಬಾರ್ಯ ನಂತರ ಉಪ್ಪಿನಂಗಡಿ, ಪುತ್ತೂರಿನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮವು ಮತ್ತೊಮ್ಮೆ ಬಾರ್ಯದ ವಿಶೇಷ ನೇಮೋತ್ಸವದಲ್ಲಿ ಜರಗುತ್ತಿರುವುದು ಯೋಗ. ಬಾರ್ಯ ಗ್ರಾಮದ ದೈವಗಳ ಗುರಿಕಾರನಾಗಿ ಸೇವೆ ಸಲ್ಲಿಸುವ ಅವಕಾಶ ಹಿರಿಯರ ಅನುಗ್ರಹದಿಂದ ಪ್ರಾಪ್ತವಾದ ನಿಮಿತ್ತ ಗುತ್ತಿನ ಮನೆಯವರನ್ನು ಗೌರವಿಸಿದರು.

ಶ್ರುತಿ ಪ್ರದೀಪ್ ಪ್ರಾರ್ಥಿಸಿದರು. ಪ್ರೇಮ ನೂರಿತ್ತಾಯ ಸನ್ಮಾನ ಪತ್ರ ವಾಚಿಸಿದರು.
ಬಿ. ಸುಂದರ ನೂರಿತ್ತಾಯ ಸ್ವಾಗತಿಸಿ, ಸ್ವರ್ಣಲತಾ ಭಾಸ್ಕರ ವಂದಿಸಿದರು. ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…