ಸ್ಥಳೀಯ

ತನ್ನನ್ನು ನೋಡಲು ವಿದ್ಯುತ್ ಟವರ್ ಏರಿದ್ದವರನ್ನು ಕೆಳಗಿಳಿಸಿ ಪ್ರಾಣ ಉಳಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಎನ್ಡಿಎ ಒಕ್ಕೂಟದ ಆಂಧ್ರಪ್ರದೇಶದ ಮೊದಲ ಚುನಾವಣಾ ರ್ಯಾಲಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ನೋಡಲೆಂದು ವಿದ್ಯುತ್ ಟವರ್ ಏರಿದ್ದವರನ್ನು ಕೆಳಕ್ಕೆ ಇಳಿಸಿದ ಪ್ರಸಂಗ ನಡೆದಿದೆ. ಈ ಮೂಲಕ ಅವರು ದೊಡ್ಡ ಅವಘಡವೊಂದನ್ನು ತಪ್ಪಿಸಿದ್ದಾರೆ. ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಪಟ್ಟಣದ ಬಳಿಯ ಬೊಪ್ಪುಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪ್ರಚಾರದ ವೇದಿಕೆಯಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ಇದ್ದರು. ಈ ವೇಳೆ ತಮ್ಮನ್ನು ನೋಡಲು ಟವರ್ ಏರಿದ್ದ ಅಭಿಮಾನಿಗಳ ಕೃತ್ಯವನ್ನು ಮೋದಿ ಗಮನಿಸಿದರು. ಸಂಭಾವ್ಯ ದುರ್ಘಟನೆ ತಪ್ಪಿಸಲು ತಕ್ಷಣವೇ ಕೆಳಕ್ಕೆ ಪವನ್ ಕಲ್ಯಾಣ್ ಮಾತನಾಡುತ್ತಿದ್ದಾಗ ವಿದ್ಯುತ್ ಗೋಪುರ ಮೇಲೆ ಅಭಿಮಾನಿಗಳು ಏರಿದ್ದರು. ಅದನ್ನು ಗಮನಿಸಿದ ಪ್ರಧಾನಿ, ಅಪಾಯಕಾರಿಯಾಗಿರುವುದರಿಂದ ಟವರ್ ನಿಂದ ಕೆಳಗಿಳಿಯುವಂತೆ ಜನರನ್ನು ಒತ್ತಾಯಿಸಲು ಮೈಕ್ ತೆಗೆದುಕೊಂಡರು.

SRK Ladders

“ದಯವಿಟ್ಟು ಗೋಪುರವನ್ನು ಹತ್ತಬೇಡಿ. ವಿದ್ಯುತ್ ತಂತಿಗಳೆಲ್ಲವೂ ಅಲ್ಲಲ್ಲಿ ಇವೆ. ನೀನು ಏನು ಮಾಡುತ್ತಿರುವಿರಿ? ನಿಮ್ಮ ಜೀವನ ನಮಗೆ ಬಹಳ ಮುಖ್ಯ. ಏನಾದರೂ ಅಪಘಾತ ಸಂಭವಿಸಿದರೆ ಅದು ನಮಗೆ ತುಂಬಾ ನೋವಿನಿಂದ ಸಂಗತಿಯಾಗುತತದೆ ಎಂದು ಪಿಎಂ ಮೋದಿ ನೇರವಾಗಿ ಹೇಳಿದರು. ಜನರು ಗೋಪುರವನ್ನು ಹತ್ತದಂತೆ ನೋಡಿಕೊಳ್ಳಲು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3