ಸ್ಥಳೀಯ

ಕೊಯಿಲದಲ್ಲಿ ಪೌಲ್ಟ್ರಿ ಫಾರಂ- ಒಂದು ಸಾವಿರ ಮಂದಿಗೆ ಉದ್ಯೋಗ: ಶಾಸಕ ಅಶೋಕ್ ರೈ

ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖಾ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ೫೦ ಎಕ್ರೆ ಜಾಗವನ್ನು ಪೌಲ್ಟ್ರಿ ಫಾರಂಗೆ ಲೀಸ್‌ಗೆ ನೀಡುವಂತೆ ಪಶುಸಂಗೋಪನಾ ಸಚಿವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖಾ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ 50 ಎಕ್ರೆ ಜಾಗವನ್ನು ಪೌಲ್ಟ್ರಿ ಫಾರಂಗೆ ಲೀಸ್‌ಗೆ ನೀಡುವಂತೆ ಪಶುಸಂಗೋಪನಾ ಸಚಿವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.

maithri

ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು. ಕೊಯಿಲದಲ್ಲಿ ಕಂಪೆನಿಯೊಂದು ಪೌಲ್ಟ್ರಿ ಫಾರಂ ಪ್ರಾರಂಭ ಮಾಡುವುದಾಗಿ ತನ್ನಲ್ಲಿ ತಿಳಿಸಿದೆ. ಅವರಿಗೆ 5೦ ಎಕ್ರೆ ಜಾಗ ಬೇಕಾಗಿದೆ. ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿ ಕೊಯಿಲದಲ್ಲಿರುವ ಜಾಗದಲ್ಲಿ ಕಂಪೆನಿಗೆ ಲೀಸ್‌ಗೆ ಜಾಗವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಂಪೆನಿ ಸುಮಾರು 1೦೦ ಕೋಟಿ ರೂ ವೆಚ್ಚದಲ್ಲಿ ಉದ್ಯಮವನ್ನು ಪ್ರಾರಂಭ ಮಾಡಲಿದ್ದು ಇದರಿಂದ ಸ್ಥಳೀಯವಾಗಿ 1೦೦೦ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಸಚಿವರಿಗೆ ಶಾಸಕರು ತಿಳಿಸಿದ್ದಾರೆ. ಜಾಗ ನೀಡುವುದಾಗಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

ಕೊಯಿಲದಲ್ಲಿ 5೦ ಎಕ್ರೆ ಜಾಗದಲ್ಲಿ ಬೃಹತ್ ಪೌಲ್ಟ್ರಿ ಫಾರಂ ನಿರ್ಮಾಣವಾಗಲಿದೆ. ಸುಮಾರು 1೦೦ ಕೋಟಿ ರೂ ವೆಚ್ಚದಲ್ಲಿ ಕೆಂಪಿನಿಯೊಂದು ಈ ಫಾರಂ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ಸ್ಥಳೀಯ ಸುಮಾರು 1೦೦೦ ಮಂದಿಗೆ ಉದ್ಯೋಗವೂ ಲಭಿಸಲಿದೆ. ಈ ಯೋಜನೆಗೆ ಜಾಗ ಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಜಾಗ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಶೋಕ್ ರೈ, ಶಾಸಕರು, ಪುತ್ತೂರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 124