ಸ್ಥಳೀಯ

ಪುತ್ತೂರು ಬಿಜೆಪಿ ಕಚೇರಿಗೆ ಅರುಣ್ ಕುಮಾ‌ರ್ ಪುತ್ತಿಲ ಎಂಟ್ರಿ!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾದ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ಬಿಜೆಪಿ ಕಚೇರಿಗೆ ಭಾನುವಾರ ಭೇಟಿ ನೀಡಿದರು.

ಕಳೆದ ಕೆಲ ವರ್ಷಗಳಿಂದ ಪುತ್ತಿಲ ಅವರು ಬಿಜೆಪಿ ಕಚೇರಿಗೆ ತೆರಳಿರಲಿಲ್ಲ. ಇದೀಗ ಬಿಜೆಪಿ ಪ್ರಮುಖರು ಬಿಜೆಪಿ ಕಚೇರಿಗೆ ಸ್ವಾಗತಿಸಿಕೊಂಡಿದ್ದಾರೆ.

SRK Ladders

ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಸಹಿತ ಪ್ರಮುಖರು ಅವರನ್ನು ಸ್ವಾಗತಿಸಿದರು. ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು, ರವಿ ಕುಮಾರ್, ಅನಿಲ್ ತೆಂಕಿಲ ಸಹಿತ ಹಲವಾರು ಮಂದಿ ಅರುಣ್ ಕುಮಾ‌ರ್ ಪುತ್ತಿಲ ಜೊತೆಗಿದ್ದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಸಂದರ್ಭ ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚದ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಜಿಲ್ಲಾ ಬಿಜೆಪಿ ಪ್ರಮುಖರಾದ ಬುಡಿಯಾರು ರಾಧಾಕೃಷ್ಣ ರೈ, ವಿದ್ಯಾ ಆರ್ ಗೌರಿ,ಆರ್ ಸಿ ನಾರಾಯಣ್ ಸಹಜ್ ರೈ,ಸುರೇಶ್ ಕಣ್ಣರಾಯ, ಸುಧೀ‌ರ್ ಶೆಟ್ಟಿ, ಜ್ಯೋತಿ ಆರ್ ನಾಯಕ್, ರಾಧಾಕೃಷ್ಣ ನಂದಿಲ, ಇಂದುಶೇಖ‌ರ್, ಲೋಹಿತ್ ಅಮ್ಮಿನಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3