ರಾಜ್ಯ ವಾರ್ತೆ

ಸನ್ಯಾಸತ್ವ ಸ್ವೀಕರಿಸಿದ ಕೆಎಎಸ್ ಅಧಿಕಾರಿ ಡಾ.ಹೆಚ್ ಎಲ್ ನಾಗರಾಜು

ವಿಶ್ವ ಒಕ್ಕಲಿಗ ಮಠ ಮಹಾಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್ ಎಲ್ ನಾಗರಾಜು (HL Nagaraju) ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೆಂಗೇರಿ: ವಿಶ್ವ ಒಕ್ಕಲಿಗ ಮಠ ಮಹಾಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್ ಎಲ್ ನಾಗರಾಜು (HL Nagaraju) ಸನ್ಯಾಸತ್ವ ಸ್ವೀಕರಿಸಿದ್ದಾರೆ.

akshaya college

ನಗರದ ಕೆಂಗೇರಿ ಬಳಿಯಲ್ಲಿ ಇರುವಂತ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸುವ ಮೂಲಕ, ಪಟ್ಟಾಭಿಷೇಕಕ್ಕೇರಿದ್ದಾರೆ. ಈ ಮೂಲಕ ಕೆಲವು ದಿನಗಳ ಹಿಂದಷ್ಟೇ ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕನ್ನು ನೀಡಬಾರದೆಂದು ನಾಲಗೆ ಹರಿ ಬಿಟ್ಟಿದ್ದ ಚಂದ್ರಶೇಖರನಾಥ ಸ್ವಾಮೀಜಿಯ ಉತ್ತರಾಧಿಕಾರಿಯಾಗಿ ಡಾಕ್ಟರ್ ಎಚ್ ಎಲ್ ನಾಗರಾಜು ಅವರು ನೇಮಕ ಆಗಿದ್ದಾರೆ.

ಈ ಪಟ್ಟಾಭಿಷೇಕ ಸಂದರ್ಭದಲ್ಲಿ ನೂರಾರು ಸ್ವಾಮೀಜಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿಗಳು ‘ಎರಡು ಮಠಗಳ ನಡುವೆ ಏನೋ ಒಂದು ಸಮಸ್ಯೆ ಇದೆ ಎಂದು ನಿಡುಮಾವಡಿ ಶ್ರೀಗಳು ಹೇಳಿದಾಗ ಎಲ್ಲರಿಗೂ ಅನ್ನಿಸುತ್ತೆ. ಆದರೆ ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ ಎಂದು ಪೂಜ್ಯರು ಹೇಳಿದ್ದಾರೆ. ಮುಂದೆಯೂ ಕೂಡ ಯಾವುದೇ ರೀತಿ ಸಮಸ್ಯೆಗಳು ಬರದಂತೆ ನಡೆಸಿಕೊಂಡು ಹೋಗಬೇಕು. ನಾಗರಾಜ್‌ರವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ಖುಷಿಯ ವಿಚಾರ. ನಾವೆಲ್ಲಾ ಒಂದೇ ಗುರು ಪರಂಪರೆಯವರು. ಕಾಲದ ಸಂದರ್ಭ ಇಂದು ನಿಶ್ಚಲಾನಂದನಾಥ ಸ್ವಾಮಿಗಳು ಕಂಕಣ ತೊಟ್ಟು ಸಮಾಜದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts