ರಾಜ್ಯ ವಾರ್ತೆ

ಸರಕಾರಿ ಆಸ್ಪತ್ರೆಯ ಉಚಿತ ಸೇವೆಗೆ ಬರೆ!! APL ಕಾರ್ಡ್’ದಾರರೂ ಪಾವತಿಸಬೇಕಾದ ಮೊತ್ತ ಎಷ್ಟು ಗೊತ್ತೇ?

ಈ ಸುದ್ದಿಯನ್ನು ಶೇರ್ ಮಾಡಿ

ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗ ಪತ್ತೆ ಸೇವೆ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ. 70ರಷ್ಟು ಶುಲ್ಕ ಪಾವತಿ ಕಡ್ಡಾಯ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

maithri

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಲ್ಲಿ ಇದುವರೆಗೆ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಸಿಟಿ, ಎಂ.ಆ‌ರ್.ಐ ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಜುಲೈನಲ್ಲಿ ಶುಲ್ಕ ಪಾವತಿ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಸೆ.23 ರ ಮಂಗಳವಾರದಿಂದಲೇ ಎಪಿಎಲ್ ಕಾರ್ಡ್‌ದಾರರಿಗೆ ಶುಲ್ಕ ಪಾವತಿ ಮಾಡಿ ಸೇವೆ ಪಡೆಯುವುದನ್ನು ಕಡ್ಡಾಯ ಮಾಡಿ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಐಟಿ ವಿಭಾಗದ ಮೂಲಕ ಲಾಜಿಸ್ಟಿಕ್ ಅನುಷ್ಠಾನ ಮಾಡುವುದನ್ನು ಕಡ್ಡಾಯ ಮಾಡಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸೆ.18 ರಂದೇ ಈ ಆದೇಶ ಹೊರಡಿಸಿದ್ದು, ಸೆ.23 ರಿಂದ ಕಡ್ಡಾಯವಾಗಿ ಎಪಿಎಲ್‌ ಕಾರ್ಡ್‌ಾರರು ಶೇ.70/30 ಪ್ರಕಾರ ಆನ್ಸೆನ್ ಹಾಗೂ ಆಫೈನ್ ಪಾವತಿ ಮೂಲಕ ಪಡೆದುಕೊಳ್ಳಬಹುದಾಗಿದೆ.

ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಚಿತ್ರದುರ್ಗ, ಉಡುಪಿ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕೊಡಗು, ತುಮಕೂರು, ಕೋಲಾರ, ಕಾರವಾರ ಜಿಲ್ಲಾ ಆಸ್ಪತ್ರೆಗಳು ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನ್‌ಗೆ ಎಪಿಎಲ್ ಕಾರ್ಡ್‌ದಾರರು ಶುಲ್ಕ ಭರಿಸಿ ಸೇವೆ ಪಡೆಯಬೇಕಿದೆ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts