ರಾಜ್ಯ ವಾರ್ತೆ

ಬೆಂಗಳೂರಿನಲ್ಲಿ ಡ್ರೋನ್ ತರಬೇತಿ ಕೇಂದ್ರ ಸ್ಥಾಪನೆ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಆಪರೇಷನ್ ಸಿಂದೂರದ ಬಳಿಕ ದೇಶದ ಭದ್ರತಾ ಪಡೆಯಲ್ಲಿ ಡೋನ್‌ಗಳ ನಿರ್ವಹಣೆಯ ತರಬೇತಿಯ ಅವಶ್ಯಕತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಸೇರಿ ದೇಶದ 4 ಸ್ಥಳಗಳಲ್ಲಿ 19 ಡ್ರೋನ್ ಕೇಂದ್ರ ಹಾಗೂ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಭಾರತೀಯ ಸೇನೆಯು ಯೋಜಿಸಿದೆ. ಆಪರೇಷನ್ ಸಿಂದೂರದ ವೇಳೆ ಡ್ರೋನ್‌ಗಳು ಅತಿ ಮುಖ್ಯ ಪಾತ್ರ ವಹಿಸಿದ್ದು, ಭದ್ರತಾ ಪಡೆಗಳಲ್ಲಿ ಇದೀಗ ಡೋನ್‌ಗಳು ಉತ್ತಮ ದರ್ಜೆಯ ಶಸ್ತ್ರಾಸ್ತ್ರ ವ್ಯವಸ್ಥೆ ಎನಿಸಿಕೊಂಡಿವೆ.

chennai-shopping
maithri

ಕೆಲವು ಆಯ್ದ ಉತ್ತಮ ಡ್ರೋನ್ ವ್ಯಾಪಾರಿಗಳ ಬಳಿ ಸೇನೆಯು ಡ್ರೋನ್ ತರಬೇತಿ ಕೇಂದ್ರಗಳ ತುರ್ತು ಸ್ಥಾಪನೆಗೆ ಪ್ರಸ್ತಾಪ ಇರಿಸಿದೆ ಎನ್ನಲಾಗಿದ್ದು, ಶೀಘ್ರವೇ ತರಬೇತಿ ಕಾರ್ಯಾರಂಭವಾಗಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

  • ಪ್ರತಿ ಯೋಧನಿಗೂ ಡ್ರೋನ್ ನಿರ್ವಹಣೆ ಸಾಮರ್ಥ್ಯ ವೃದ್ಧಿ

ಆಪರೇಷನ್ ಸಿಂದೂರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡ್ರೋನ್

  • ಕಾರ್ಯಚರಣೆಯಲ್ಲಿ ಡ್ರೋನ್ ಪ್ರಮುಖ ಶಸ್ತ್ರಾಸ್ತ್ರವಾಗಿ ಬಳಕೆ
  • ಡ್ರೋನ್ ಮೂಲಕ ಕಣ್ಣಾವಲು, ಗುಪ್ತಚರ ಮಾಹಿತಿ ಹೆಚ್ಚಳ

ತರಬೇತಿಗೆ 1000 ಡ್ರೋನ್‌ಗಳ ಬಳಕೆ

ನ್ಯಾನೋ, ಮೈಕ್ರೋ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಡೋನ್ ಸೇರಿ 200 ಮೀ.ನಿಂದ 50 ಕಿ.ಮೀ. ವ್ಯಾಪ್ತಿಯ 1,000ಕ್ಕೂ ಹೆಚ್ಚು ಡೋನ್‌ಗಳನ್ನು ಈ ತರಬೇತಿಯಲ್ಲಿ ಬಳಸಲು ಯೋಜಿಸಲಾಗಿದೆ. ಈ ಯೋಜನೆಯಡಿ ಹಲವು ವರ್ಗಗಳ ಡ್ರೋನ್‌ಗಳ ನಿರ್ವಹಣೆ ತರಬೇತಿ, ಸಂಬಂಧಿತ ಮೂಲಸೌಕರ್ಯಗಳಲ್ಲಿ ಅಣಕು ಕಾರ್ಯಾಚರಣೆ ಸೇರಿ ಇನ್ನೂ ಅನೇಕ ಚಟುವಟಿಕೆಗಳಿದ್ದು, ಸೇನೆಯ ಎಲ್ಲ ದರ್ಜೆಯ ಸಿಬ್ಬಂದಿಗಳಿಗೂ ತರಬೇತಿಗಳಿರಲಿವೆ. 2026ರ ಜನವರಿಯ ವೇಳೆಗೆ ಈ ತರಬೇತಿ ಕೇಂದ್ರಗಳ ಸ್ಥಾಪನೆಗೆ ಸೇನೆಯು ಯೋಜಿಸಿದೆ ಎನ್ನಲಾಗಿದೆ.

ಬೆಂಗಳೂರು ಸೇರಿ 4 ಸ್ಥಳಗಳಲ್ಲಿ ತರಬೇತಿ

ಈ ಯೋಜನೆಯಡಿ ಒಪ್ಪಂದ ಮಾಡಿಕೊಳ್ಳುವ ಡ್ರೋನ್ ಸಂಸ್ಥೆಗಳು, ಸ್ಥಾಪಿಸಲ್ಪಟ್ಟ ತರಬೇತಿ ಕೇಂದ್ರಗಳು ಹಾಗೂ ಮೂಲಸೌಕರ್ಯಗಳ ನಿರ್ವಹಣೆ ಜತೆಗೆ ನಿಗದಿತ ಸೇನಾ ಸಿಬ್ಬಂದಿಗೆ ತರಬೇತಿ ಆಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಬೆಂಗಳೂರು, ಡೆಹರಾಡೂನ್, ಮೊವ್ ಹಾಗೂ ದೇವ್‌ಲಾಲಿಯಲ್ಲಿ ತಲಾ 25 ಸಿಬ್ಬಂದಿಯಂತೆ 4-6 ದಿನಗಳ ಕಾಲ ಈ ಸಂಸ್ಥೆಗಳು ತರಬೇತಿ ನೀಡಬೇಕಿರುತ್ತದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್‌ ನಾಯಕ್ ಇಂದಾಜೆ ನೇಮಕ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್‌ ಪಾಸ್‌ ವಿತರಣೆ ಮಾಡಲು ಸರಕಾರ ರಚಿಸಿರುವ…