tamanvi
ವಿಶೇಷ

ವಿಬಿಜಿ ರಾಮ್ ಜಿ ಲೋಗೋ ಸ್ಪರ್ಧೆ: ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಪುತ್ತೂರಿನ ರಾಮ್ ಪ್ರಸಾದ್

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರುಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಪುತ್ತೂರಿನ ಕಲಾವಿದ ರಾಮ್‌ ಪ್ರಸಾದ್‌ ಕೆ. ಅವರಿಗೆ ಸೋಮವಾರ ನವದೆಹಲಿಯ ಪೂಸಾದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ-2026ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಪ್ರಶಸ್ತಿ ಪ್ರದಾನ ಮಾಡಿದರು.

maithri

ರಾಮ್ ಪ್ರಸಾದ್ ಅವರು ಲೋಗೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 50 ಸಾವಿರ ರೂ. ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ವಿವಿಧ ರಾಜ್ಯಗಳ ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ವಿಬಿಜಿ ರಾಮ್ ಜಿ ಕಾಯ್ದೆ-2025ರ ಪ್ರಚಾರ-ಜಾಗೃತಿಯ ನಿಟ್ಟಿನಲ್ಲಿ ಮೈ ಭಾರತ್ ಮತ್ತು ಮೈ ಜಿಒವಿ ಸಹಯೋಗದೊಂದಿಗೆ ಲೋಗೋ ವಿನ್ಯಾಸ, ರೀಲ್/ವೀಡಿಯೋ ಚಾಲೆಂಜ್, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts