ಧಾರ್ಮಿಕ

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಆಮಂತ್ರಣ ಪತ್ರ ಬಿಡುಗಡೆ | ಸವಣೂರು ಜಾತ್ರೋತ್ಸವ ಊರಿನ ಹಬ್ಬ ಆಗಬೇಕು: ಸೀತಾರಾಮ ರೈ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಫೆ. 7 ಮತ್ತು 8ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಜ. 13ರಂದು ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯರು ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಅರ್ಚಕ ನಾರಾಯಣ ಬಡೆಕಿಲ್ಲಾಯ ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಅಧ್ಯಕ್ಷತೆ ವಹಿಸಿದ್ದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು. ಊರ ಭಕ್ತಾಭಿಮಾನಿಗಳು ಎಲ್ಲರೂ ಒಗ್ಗೂಡಿ ಕೆಲಸವನ್ನು ಮಾಡಬೇಕು. ಪ್ರತೀ ಮನೆ ಮನೆಗೆ ಜಾತ್ರೋತ್ಸವದ ಆಮಂತ್ರಣ ತಲುಪಿಸಬೇಕು. ಕುದ್ಮಾರು, ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ ವ್ಯಾಪ್ತಿಯ ಜನರು ಹೆಚ್ಚು ಭಾಗವಹಿಸಬೇಕು. ಅಲ್ಲಲ್ಲಿ ಜಾತ್ರೋತ್ಸವಕ್ಕೆ ಬ್ಯಾನರ್ ಹಾಕಬೇಕು. ಇದಕ್ಕೆ ಪೂರ್ಣ ಸಹಕಾರವನ್ನು ಕೊಡುತ್ತೇನೆ ಎಂದು ಹೇಳಿ, ಸವಣೂರು  ಜಾತ್ರೋತ್ಸವ ಊರಿನ ಹಬ್ಬವಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಂಧ್ಯಾ ವಿ. ಶೆಟ್ಟಿ ಸವಣೂರುಗುತ್ತು, ಬೆಳಿಯಪ್ಪ ಗೌಡ ಚೌಕಿಮಠ, ಶ್ರೀಧರ್ ಸುಣ್ಣಾಜೆ, ಗಂಗಾಧರ್ ಸುಣ್ಣಾಜೆ, ಚಂದ್ರಾವತಿ ಸುಣ್ಣಾಜೆ, ದಯಾನಂದ ಮಾಲೆತ್ತಾರು, ಉಮಾಪ್ರಸಾದ್ ರೈ ನಡುಬೈಲು, ಸತೀಶ್ ಬಲ್ಯಾಯ, ಜಯರಾಮ ರೈ ಮೂಡಂಬೈಲು, ಚೇತನ್ ಕುಮಾರ್ ಕೋಡಿಬೈಲು, ಉಮೇಶ್ ಸುಣ್ಣಾಜೆ,  ಶಾರದಾ ಮಾಲೆತ್ತಾರು, ಮೀನಾಕ್ಷಿ ಶೆಟ್ಟಿ ಬರೆಮೇಲು, ಮಮತಾ ಜಿ. ಭಟ್ ಪದ್ಮಾವತಿ ಮಾಲೆತ್ತಾರು, ಗೀತಾ ಬಾರಿಕೆ, ಕಲಾವತಿ, ಕುಸುಮ, ಜಯಶ್ರೀ, ಪ್ರಶಾಂತ್, ಯಮುನಾ, ಜಯಂತಿ ಬಾರಿಕೆ, ಮೀನಾಕ್ಷಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಆರ್ ಆರ್ ಸ್ಕ್ರ್ಯಾಪ್ ಮಾಲಕ ಎಸ್.ಎ. ಇಸ್ಮಾಯಿಲ್

ಮಾಣಿ: ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಮದ್ರಸಾ ಹಾಲ್ ನಲ್ಲಿ ನಡೆಯಿತು.…

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಭಾಗವತೆ ಕಾವ್ಯಶ್ರೀ ಅಜೇರು, ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಉಮೇಶ್ ಮಿಜಾರು ಆಯ್ಕೆ

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ…