ಉಪ್ಪಿನಂಗಡಿ: ಇಲ್ಲಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಸಹಕಾರದಲ್ಲಿ ಸೆ. 16ರ ಮಂಗಳವಾರ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ 30ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ನಡೆಯಲಿದೆ.
ಪುರೋಹಿತ್ ವಿ. ಪ್ರಕಾಶ ಆಚಾರ್ಯ ವೇಣೂರು ಅವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ ಮತ್ತು ವಿಶ್ವಕರ್ಮ ಪೂಜೆ ಪ್ರಾರಂಭ. 10ರಿಂದ ಧಾರ್ಮಿಕ ಸಭೆ ಮತ್ತು ಸನ್ಮಾನ, ಅಭಿನಂದನೆ, ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಹರೀಶ್ ಆಚಾರ್ಯ ಪುಳಿತ್ತಡಿ ಅಧ್ಯಕ್ಷತೆ ವಹಿಸಲಿರುವರು. ದಿನೇಶ್ ಯು. ಆಚಾರ್ಯ ಚಂದ್ರ ಫ್ಯಾನ್ಸಿ ಪುತ್ತೂರು, ಜ್ಯೋತಿ ದಿನೇಶ ಆಚಾರ್ಯ ಸಹಶಿಕ್ಷಕಿ ಸ.ಪ್ರೌ. ಶಾಲೆ ಶಾಂತಿನಗರ ಅತಿಥಿಗಳಾಗಿರುವರು.
ರಾಮಚಂದ್ರ ಆಚಾರ್ಯ ಕಾಷ್ಠಶಿಲ್ಪಿಗಳು ಕೊಳ್ಕೊಟ್ಟು ನೆಲ್ಯಾಡಿ, ಸುರಕ್ಷಾ ಆಚಾರ್ಯ ಕನ್ನಾಜೆ ಡಾಟ್ ಮಂಡಲ ಆರ್ಟ್ ಕಲಾವಿದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಹೋಲ್ಡರ್ ಅವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ ಗಂಟೆ 1.30ರಿಂದ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪೂಜೆಗೆ ಹೂವಿನ ಮಾಲೆ ತರುವವರು ಮನೆಯಲ್ಲಿಯೇ ತಯಾರಿಸಿ ಬೆಳಿಗ್ಗೆ ಗಂಟೆ 9-30ರ ಒಳಗೆ ತರಬೇಕಾಗಿ ಪ್ರಕಟಣೆ ತಿಳಿಸಿದೆ.