ರಾಜ್ಯ ವಾರ್ತೆ

ನಂದಿನಿ ಉತ್ಪನ್ನಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿದರೆ ಕಠಿಣ ಕ್ರಮ: ಡಿ.ಕೆ. ಸುರೇಶ್ ಎಚ್ಚರಿಕೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ .ಸುರೇಶ್

maithri

ಕರ್ನಾಟಕ ಮಿಲ್ಕ್  ಫೆಡರೇಶನ್(ಕೆಎಂಎಫ್) ವತಿಯಿಂದ ಬಿಡುಗಡೆಗೊಂಡ ಪ್ರಕಟಣೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಹರಡಲಾಗುತ್ತಿರುವ ವದಂತಿಗಳು ಸಂಪೂರ್ಣ ಆಧಾರರಹಿತವೆಂದು ಸ್ಪಷ್ಟಪಡಿಸಲಾಗಿದೆ.

ಕೆಎಂಎಫ್ ತಿಳಿಸಿದಂತೆ, ನಂದಿನಿ ಉತ್ಪನ್ನಗಳು ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತಯಾರಿಸಲಾಗುತ್ತಿವೆ. ಎಫ್‌ಎಸ್‌ಎಸ್‌ಎಐ ( Food Safety and Standards Authority of India) ನಿಗದಿಪಡಿಸಿದ ಗುಣಮಟ್ಟದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಹಾಲಿನ ಬಗ್ಗೆ ತಪ್ಪು ಮಾಹಿತಿಗಳು ಹರಡುತ್ತಿರುವ ಹಿನ್ನೆಲೆ, ಗ್ರಾಹಕರಲ್ಲಿ ಅನಾವಶ್ಯಕ ಆತಂಕ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಂಎಫ್, ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಸೈಬರ್ ಪೊಲೀಸ್ ಇಲಾಖೆ ಮೂಲಕ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎಂದರು. ಮಾತ್ರವಲ್ಲದೆ, ಗ್ರಾಹಕರು ದೃಢೀಕೃತ ಮಾಹಿತಿಯನ್ನು ಮಾತ್ರ ನಂಬಿ, ಅಪಪ್ರಚಾರಗಳಿಗೆ ಒಳಗಾಗಬಾರದು ಎಂದು ಕೆಎಂಎಫ್ ಕೂಡ ಮನವಿ  ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್‌ ನಾಯಕ್ ಇಂದಾಜೆ ನೇಮಕ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್‌ ಪಾಸ್‌ ವಿತರಣೆ ಮಾಡಲು ಸರಕಾರ ರಚಿಸಿರುವ…

ದೇವಳ ಪಕ್ಕದಲ್ಲಿ ಸರಕಾರಿ ಶಾಲೆ: ಬಿಸಿಯೂಟದ ಮೊಟ್ಟೆಗೆ ಕುತ್ತು! ವಿದ್ಯಾರ್ಥಿಗಳಿಂದ ಶಾಲೆ ತೊರೆಯುವ ಸಾಮೂಹಿಕ ಬೆದರಿಕೆ!!

ಮಧ್ಯಾಹ್ನದ ಬಿಸಿ ಊಟದ ಯೋಜನೆ ಹಿನ್ನೆಲೆಯಲ್ಲಿ ದೇವಾಲಯದ ಪಕ್ಕದಲ್ಲಿರುವ ಸರ್ಕಾರಿ ಶಾಲೆಯೊಂದರ…