tamanvi
ವಿದೇಶ

ಸುಂಕ ಸಮರ ಸಾರಿದ್ದ ಅಮೆರಿಕ, ಭಾರತ ಪರವಾಗಿ ಕೈಗೊಂಡ ಈ ಕ್ರಮದಿಂದ ಕೊಂಚ ರಿಲೀಫ್!

ಈ ಸುದ್ದಿಯನ್ನು ಶೇರ್ ಮಾಡಿ

ಭಾರತ –ಅಮೆರಿಕ ನಡುವೆ ಸುಂಕ ಸಮರ ನಡೆಯುತ್ತಿದ್ದರೆ, ಇದೀಗ ಅಮೆರಿಕ ಕೊಂಚ ಮೆತ್ತಗಾದಂತಿದೆ.

ಎಚ್-1ಬಿ ಸ್ಥಾನಮಾನಕ್ಕಾಗಿ ಪ್ರಾಯೋಜಕತ್ವ ಪಡೆದ ಇತ್ತೀಚಿನ ಅಂತಾರಾಷ್ಟ್ರೀಯ ಪದವೀಧರರು ಈಗಾಗಲೇ ದೇಶ(ಅಮೆರಿಕ)ದಲ್ಲಿದ್ದರೆ 1 ಲಕ್ಷ ಡಾಲರ್‌ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟನೆ ನೀಡಿದ್ದು ಇದರಿಂದ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ ‘ರಿಲೀಫ್’ ಸಿಕ್ಕಿದಂತಾಗಿದೆ.

ಅಸ್ತಿತ್ವದಲ್ಲಿರುವ ಎಚ್-1ಬಿ ವೀಸಾ ಹೊಂದಿರುವವರು ಕಳೆದ ತಿಂಗಳು ಘೋಷಿಸಲಾದ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಿಲ್ಲ ಎಂದು ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು.

ಕಾನೂನುಬದ್ಧ ವೀಸಾದೊಂದಿಗೆ ಈಗಾಗಲೇ ಅಮೆರಿಕಾದಲ್ಲಿ ಇರುವವರು, ಎಫ್-1 ಸೂಡೆಂಟ್ ವೀಸಾ ಹೊಂದಿರುವವರು, ಎಲ್-1 ಅಂತರ್ ಕಂಪೆನಿ ವರ್ಗಾವಣೆಯಡಿ ಬಂದವರು ಹಾಗೂ ಪ್ರಸ್ತುತ ಹೊಂದಿರುವ ಎಚ್-1ಬಿ ವೀಸಾದ ನವೀಕರಣ ಅಥವಾ ವಿಸ್ತರಣೆ ಬಯಸುವವರು 1 ಲಕ್ಷ ಡಾಲರ್ (ಸುಮಾರು 90 ಲಕ್ಷ ರೂ.) ಪಾವತಿಸುವ ಅಗತ್ಯವಿಲ್ಲ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮುರಿದುಬಿತ್ತು ಅಮೆರಿಕ – ಇರಾನ್ ಶಾಂತಿ ಒಪ್ಪಂದ’? ಇರಾನ್ ಮುಂದಿರುವುದು ಸೇಡಿನ ಬಯಕೆಯೇ ಹೊರತು, ಸ್ನೇಹದ ಪ್ರದರ್ಶನವಲ್ಲ!!

ಕೊಲ್ಲಿ ರಾಷ್ಟ್ರಗಳ ಯುದ್ಧ ಇಸ್ಲಾಮಾಬಾದ್ ಶಾಂತಿ ಒಪ್ಪಂದದಿಂದ ತಹಬದಿಗೆ ಬಂತು ಎಂದು ವಿಶ್ವವೇ…

ಬೌದ್ಧ ಭಿಕ್ಷುಗಳ ಸನ್ಯಾಸ ಶೀಲ ಭಂಗ!! 80 ಸಾವಿರ ಫೋಟೋ, ವೀಡಿಯೋದೊಂದಿಗೆ ಸಿಕ್ಕಿ ಬಿದ್ದ ವಿಲವಾನ್ ಎಮ್ನಾವತ್!!

ಥಾಯ್ಲೆಂಡ್‌ನಲ್ಲಿ ಬೌದ್ಧ ಭಿಕ್ಷುಗಳನ್ನು ಲೈಂಗಿಕ ಸಂಬಂಧಕ್ಕೆ ಆಕರ್ಷಿಸಿ, ನಂತರ ದೋಷಾರೋಪಣೆ…