ಶಿಕ್ಷಣ

ಅಂಬಿಕಾದ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸುಬ್ರಮಣ್ಯದ ಕೆಎಸ್‌ಎಸ್ ಮಹಾವಿದ್ಯಾಲಯ ಆಯೋಜಿಸಿದ ‘ಪ್ರೇರಣಾ 2025 ಕಾಮರ್ಸ್ ಫೆಸ್ಟ್’ನಲ್ಲಿ ಸ್ಪರ್ಧಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

chennai-shopping
maithri

ಟ್ರೆಷರ್ ಹಂಟ್‌ನಲ್ಲಿ ದ್ವಿತೀಯ  ಪಿಯುಸಿಯ  ಅನ್ಸಿಕಾ ಎನ್. ಶೆಟ್ಟಿ ಹಾಗೂ ಜಿ ಸುನಿಧಿ ಪ್ರಭು ಪ್ರಥಮ ಸ್ಥಾನ ಗಳಿಸಿದರೆ, ಫೈನಾನ್ಸ್ ಯೂನಿಟ್ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿಯ ಕೆ. ಪ್ರತೀಕ್ ಪಡಿಯಾರ್ ಹಾಗೂ ದಿಗಂತ್ ಎನ್. ಶೆಟ್ಟಿ ಪ್ರಥಮ, ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿಯ  ಜೀವಿಕಾ  ಜಿ.ಎಚ್. ಹಾಗೂ ಅನಘಾ ವಿ.ಪಿ.  ದ್ವಿತೀಯ  ಮತ್ತು ಫೇಸ್ ಪೈಂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿಯ ವಿಘ್ನೇಶ್ ಸಿ ರೈ ಹಾಗೂ ಯಶಸ್ ಎಸ್.ಎನ್. ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ಮಾದರಿ ಸ್ಪರ್ಧೆ:

ಅಂಬಿಕಾ ಸಿ.ಬಿ.ಎಸ್.ಇ. ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿ ಸಂಹಿತ್ ಜೋಸ್ಸಿ ಲೋಬೊ ಅವರು ವಿವೇಕಾನಂದ ಕೇಂದ್ರೀಯ ಶಾಲೆಯಲ್ಲಿ ನಡೆದ ಇನ್‌ಸೆಫ್ ರೀಜನಲ್ ಫೇರ್‌ನ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ, ಹರ್ಬಲ್ ಶಾಂಪು ತಯಾರಿಕೆ ವಿಷಯವನ್ನು ಪ್ರಸ್ತುತ ಪಡಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ನೆಕ್ಕಿಲಾಡಿ ಆದರ್ಶ ನಗರದ  ನಿವಾಸಿಗಳಾದ ಸುಪ್ರೀತ್ ಜೆ ಲೋಬೊ ಮತ್ತು ಶೈನಿ ಪಾಯಸ್ ದಂಪತಿ ಪುತ್ರ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ | ಸಂಗೀತ ಭಾರತೀಯ ಸಂಸ್ಕೃತಿಯ ಸಂಪತ್ತು: ವಿದ್ವಾನ್ ಕಾಂಚನ ಎ. ಈಶ್ವರ ಭಟ್

ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ.  ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ…

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…