tamanvi
ಪ್ರಚಲಿತ

ತಮಿಳುನಾಡು ಚುನಾವಣೆ: ಬಿಜೆಪಿಯ ಅಭ್ಯರ್ಥಿಗಳ ಪೈಕಿ ಅಣ್ಣಾಮಲೈ ಹೆಸರಿಲ್ಲ!! ಪೋಸ್ಟ್ ಮಾಡಿ ತನ್ನ ಗುರಿ ತಿಳಿಸಿದ ಅಣ್ಣಾಮಲೈ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಬಿಟ್ಟು ಉಳಿದ 27 ಅಭ್ಯರ್ಥಿಗಳನ್ನು ಬಿಜೆಪಿ ತಮಿಳುನಾಡು ಚುನಾವಣೆಯ ಕಣಕ್ಕಿಳಿಸಿದೆ.

ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಗೆ ಭರವಸೆಯ ನೆಲೆಯನ್ನು ಒದಗಿಸಿದ ಅಣ್ಣಾಮಲೈ ಅವರನ್ನು ಬಿಜೆಪಿ ದೂರವಿಡಲು ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳು ಹಿಂದಿನ ಚುನಾವಣೆಯ ಸಂದರ್ಭವೂ ಕೇಳಿಬಂದಿತ್ತು. ಇದೀಗ ಮತ್ತದೇ ಪ್ರಶ್ನೆ ಎದುರಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23, 2026 ರಂದು ನಡೆಯಲಿವೆ. ಭಾರತೀಯ ಜನತಾ ಪಕ್ಷವು ಈ ಚುನಾವಣೆಗಳಿಗೆ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಎನ್​ಡಿಎ ಮೈತ್ರಿಕೂಟದ ಭಾಗವಾಗಿ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಮಿಳುನಾಡಿನಾದ್ಯಂತ 234 ವಿಧಾನಸಭಾ ಸ್ಥಾನಗಳಿವೆ.

ಎಐಎಡಿಎಂಕೆ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಿಜೆಪಿಗೆ 27 ಸ್ಥಾನಗಳಿವೆ. ಇದರಲ್ಲಿ 27 ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಇಳಿಸಿದೆ. ಉಳಿದ ಸ್ಥಾನಗಳನ್ನು ಇತರ ಪಕ್ಷಗಳು ತನ್ನ ಅಭ್ಯರ್ಥೀಗಳನ್ನು ಕಣಕ್ಕಿಳಿಸಲಿವೆ.

ತಮಿಳುನಾಡು ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 6. ಬಿಜೆಪಿ ಈಗ ತನ್ನ ಅಭ್ಯರ್ಥಿಗಳೊಂದಿಗೆ ಬಿರುಸಿನ ಪ್ರಚಾರವನ್ನು ಪ್ರಾರಂಭಿಸಲು ಸಜ್ಜಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ರಿಂದ ಮಾಜಿ ರಾಜ್ಯಪಾಲ ಸುಂದರರಾಜನ್ ವರೆಗೆ ಹಲವು ಹೆಸರುಗಳಿವೆ. ದಲಿತ ಸಮುದಾಯಕ್ಕೆ ಮೀಸಲಾಗಿರುವ ಅವಿನಾಶಿ ವಿಧಾನಸಭಾ ಸ್ಥಾನದಿಂದ ಪಕ್ಷವು ಎಲ್. ಮುರುಗನ್ ಅವರನ್ನು ನಾಮನಿರ್ದೇಶನ ಮಾಡಿದೆ. ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್ ಇಸಾಯಿ ಸುಂದರ್​ ರಾಜನ್, ಮೈಲಾಪುರ ವಿಧಾನಸಭಾ ಸ್ಥಾನಕ್ಕೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಅಣ್ಣಾಮಲೈ ಪೋಸ್ಟ್:

ದೇಶ ಮುಂದುವರಿಯುತ್ತಿರುವಾಗ, ವಿಫಲ, ಅಹಂಕಾರಿ ಮತ್ತು ಸ್ವಾರ್ಥಪರ ಡಿಎಂಕೆ ಸರ್ಕಾರದಿಂದ ತಮಿಳುನಾಡು ಹಿಂದುಳಿದಿದೆ. ನಾನು ಒಬ್ಬ ಕಾರ್ಯಕರ್ತನಾಗಿ ನಮ್ಮ ಎಲ್ಲಾ ಬಿಜೆಪಿ ಮತ್ತು ಇತರ ಎನ್ ಡಿಎ ಅಭ್ಯರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಪ್ರಚಾರ ಮಾಡುತ್ತೇನೆ, ಚುನಾವಣೆಯಲ್ಲಿ ಎನ್ ಡಿಎ 210 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದು ಅಣ್ಣಾಮಲೈ ಪೋಸ್ಟ್ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…