ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಸಂಪ್ಯ ಅಕ್ಷಯ ಸಮೂಹ ಸಂಸ್ಥೆ, ಆಂತರಿಕ ಗುಣಮಟ್ಟ ಭರವಸೆ ಕೋಶ,  ಲಿಯೋ ಕ್ಲಬ್ ನಿಯೋಸ್ ಅಕ್ಷಯನ್ಸ್ ಮತ್ತು ಅದ್ವಯ ಕನ್ನಡ ಸಂಘದ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಅಕ್ಷಯ ಕಾಲೇಜು ಸಂಭಾಂಗಣದಲ್ಲಿ ಆಚರಿಸಲಾಯಿತು.

chennai-shopping
maithri

ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಭಾಷಾ ಪುಸ್ತಕಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಚಾಲನೆ ನೀಡಲಾಯಿತು.

ಸಾಹಿತಿ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್. ರೈ ಕಡೇಶಿವಾಲಯ ಅವರು ಕನ್ನಡ ರಾಜ್ಯೋತ್ಸವ ಮಹತ್ವ ಕುರಿತು ಮಾತನಾಡಿದರು.

ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಉಪಾಧ್ಯಕ್ಷ ರವಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪದವಿ  ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾರತ್ನ ಮತ್ತು ಆಂತರಿಕ ಭರವಸೆ ಮತ್ತು ಗುಣಮಟ್ಟ ಕೋಶದ ನಿರ್ದೇಶಕಿ ರಶ್ಮಿ, ಕನ್ನಡ ಉಪನ್ಯಾಸಕಿ ರಶ್ಮಿತಾ ಮತ್ತು ಅದ್ವಯ ಸಾಹಿತ್ಯ ಸಂಘದ ಅಧ್ಯಕ್ಷ ಸಂತೋಷ್ ಮತ್ತು ಗಣೇಶ್  ಶೆಟ್ಟಿ, ಲಯನ್ ದಯಾನಂದ ರೈ ಕೊರ್ಮಂಡ ಉಪಸ್ಥಿತರಿದ್ದರು.

ಅದ್ವಯ ಕನ್ನಡ ಸಂಘದ ಪದಾಧಿಕಾರಿಗಳ ಅರ್ಥಪೂರ್ಣ ಪದಸ್ವೀಕಾರ  ನಡೆಯಿತು. ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಉಪನ್ಯಾಸಕಿ ರಶ್ಮಿತಾ ಸ್ವಾಗತಿಸಿ, ಬಿ. ಹೆಚ್.ಎಸ್ ಉಪನ್ಯಾಸಕಿ ಶೃತ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ವಿದ್ಯಾರ್ಥಿಗಳು  ಕನ್ನಡದ ತೇರು ಮತ್ತು ಹಚ್ಚೇವು ಕನ್ನಡದ ದೀಪ ಪದ್ಯವನ್ನು ಗಾಯನ ಮಾಡಿದರು. ನೇಹಾ ದ್ವಿತೀಯ ಬಿ. ಕಾಂ ವಂದಿಸಿ, ಹರಿಪ್ರಸಾದ್ ದ್ವಿತೀಯ ಬಿಎ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ | ಸಂಗೀತ ಭಾರತೀಯ ಸಂಸ್ಕೃತಿಯ ಸಂಪತ್ತು: ವಿದ್ವಾನ್ ಕಾಂಚನ ಎ. ಈಶ್ವರ ಭಟ್

ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ.  ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ…

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…