ಕರಾವಳಿ

ಸುಬ್ರಹ್ಮಣ್ಯದಲ್ಲಿ ನಡೆದಿದ್ದ ದನ ಸಾಗಾಟ ಪ್ರಕರಣ ಅಕ್ರಮ: ಮೋಹನ್ ದಾಸ್ | ಪ್ರತಿ ತಾಲೂಕಿನಲ್ಲಿಯೂ ಗೋಶಾಲೆ ನಿರ್ಮಾಣವಾಗಲಿ: ಡಾ. ಕೃಷ್ಣಪ್ರಸನ್ನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸುಬ್ರಹ್ಮಣ್ಯದಲ್ಲಿ ನಡೆದ ದನ ಸಾಗಾಟ ಪ್ರಕರಣ ಅಕ್ರಮವಾಗಿದ್ದು, ಮುಂದೆ ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡದಂತೆ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರವಾನಿಗೆ ಅಥವಾ ಅನುಮತಿ ಇಲ್ಲದೇ ದನ ಸಾಗಾಟ ಮಾಡುವುದು ಕಾನೂನುಬಾಹಿರ. ಜಿಲ್ಲೆಗೆ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಅರುಣ್ ಅವರ ಆಗಮನದ ಬಳಿಕ ಜಿಲ್ಲೆ ಶಾಂತಿಯಿಂದಿದೆ. ಇದರ ಸುಬ್ರಹ್ಮಣ್ಯದಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಅಗತ್ಯ ಇದೆ. ಮಾತ್ರವಲ್ಲ, ಘಟನೆಯ ಬಗ್ಗೆ ರೈತ ಸಂಘಟನೆಯ ಪ್ರಮುಖರು ಸಹಾಯಕ ಆಯುಕ್ತರ ಕಚೇರಿ ಮುಂಭಾಗ ಅಸಭ್ಯವಾಗಿ ವರ್ತಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಕಾನೂನಿಗೆ ಇಲ್ಲಿ ಬೆಲೆ ಕೊಡಬೇಕು. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ನಡೆಯಬೇಕು. ಸುಬ್ರಹ್ಮಣ್ಯದಲ್ಲಿ ನಡೆದಿರುವ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಇನ್ನೊಬ್ಬರಿಗೆ ಮಾದರಿ ಆಗಬಾರದು. ಇದನ್ನು ಮುಂದಿಟ್ಟುಕೊಂಡು ಇನ್ನೊಬ್ಬರು ಅನುಮತಿ ಪಡೆದುಕೊಳ್ಳದೇ ದನವನ್ನು ಸಾಗಾಟ ಮಾಡುವಂತಾಗಬಾರದು. ಹಾಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮಾತನಾಡಿ, ದನಗಳ ಅಕ್ರಮ ಸಾಗಾಟವನ್ನು ತಡೆಯುವುದು ಸಾರ್ವಜನಿಕರದ್ದಷ್ಟೇ ಜವಾಬ್ದಾರಿಯಲ್ಲ. ಸರಕಾರವೂ ಇದರ ಬಗ್ಗೆ ಕಾಳಜಿ ವಹಿಸಬೇಕು. ಆದ್ದರಿಂದ ಪ್ರತಿ ತಾಲೂಕಿನಲ್ಲಿಯೂ ಗೋಶಾಲೆ ತೆರೆಯಬೇಕು ಎಂದರು.

ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ನಾಗೇಶ್ ಟಿ.ಎಸ್., ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ದಿನೇಶ್ ಪಂಜಿಗ, ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ ಶೆಟ್ಟಿಮಜಲು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸುದೀರ್ಘಕಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ ಐವನ್‌ ಡಿʼಸೋಜಾ

ಬೆಂಗಳೂರು: ಕರ್ನಾಟಕ ರಾಜ್ಯದ ಅತ್ಯಂತ ಸುದೀರ್ಘಕಾಲದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ…