tamanvi
ಕರಾವಳಿ

ಮಗು ಹಡೆದ ವಿದ್ಯಾರ್ಥಿನಿ ಪ್ರಕರಣ: ಆರೋಪಿ ಬಂಧನಕ್ಕೆ ಗಡು ನೀಡಿದ ಶಾಸಕ ಅಶೋಕ್ ರೈ

ಅತ್ಯಾಚಾರ ಮಾಡಿ ಮಗು ಕರುಣಿಸಿದ ಪ್ರಕರಣ: ಎರಡು ದಿನದೊಳಗೆ ಆರೋಪಿಗಳ ಬಂಧಿಸಿ; ಜಿಲ್ಲಾ ಎಸ್ಪಿಗೆ ಶಾಸಕ ಅಶೋಕ್ ರೈ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು; ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಮಾಡಿ ಮಗು ಕರುಣಿಸಿದ ಪ್ರಕರಣ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಎಸ್ಪಿ ಯವರಿಗೆ ಸೂಚನೆಯನ್ನು ನೀಡಿದ್ದಾರೆ.

ಎಸ್ಪಿ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು ಬಂಧಿಸಬೇಕು. ಆರೋಪಿಯನ್ನು ಇಷ್ಟು ದಿನ ಬಂಧಿಸದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ ಎಂದರು.

ಕೂಡಲೇ ತಂಡವನ್ನು ರಚನೆ‌ ಮಾಡಿ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸಬೇಕು ಮತ್ತು ನೊಂದ ಯುವತಿಗೆ ನ್ಯಾಯವನ್ನೂ ಕೊಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು.‌ ಇಲಾಖೆಗೆ ನನ್ನಿಂದ ಏನು ಸಹಾಯ ಬೇಕಿದ್ದರೆ ತಿಳಿಸಬೇಕು ಎಂದು ಶಾಸಕರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…