tamanvi
ಅಪರಾಧ

ಕೆಂಪು ಕೋಟೆಯಿಂದ 1 ಕೋಟಿ ಮೌಲ್ಯದ ರತ್ನ ಖಚಿತ ಕಲಶ ಕಳವು…

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ದೆಹಲಿಯ ಕೆಂಪು ಕೋಟೆ ಆವರಣದಲ್ಲಿ ದೊಡ್ಡ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.

maithri

ಕೆಂಪು ಕೋಟೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಜೈನ ಧರ್ಮದ ಧಾರ್ಮಿಕ ಸಮಾರಂಭದ ವೇಳೆ ವೇದಿಕೆಯಲ್ಲಿರಿಸಿದ್ದ ಬೆಲೆಬಾಳುವ ರತ್ನ ಖಚಿತ ಕಲಶವನ್ನು ಕದ್ದೊಯ್ಯ ಲಾಗಿದೆ.

ಈ ಘಟನೆ ಕಳೆದ ಮಂಗಳವಾರ (ಸೆ. 2) ರ ಮಂಗಳವಾರ ನ ಡೆದಿತ್ತು.  ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಭಾಗವಹಿಸಿದ್ದರು ಈ ವೇಳೆ ಗಣ್ಯರನ್ನು ವೇದಿಕೆಗೆ ಸ್ವಾಗತ ಮಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕಲಶ ಕಣ್ಮ ರೆಯಾಗಿದೆ.

ಉದ್ಯಮಿ ಸುಧೀ‌ರ್ ಜೈನ್ ಪ್ರತಿದಿನ ಪೂಜೆಗೆ ಕಲಶವನ್ನು ತ ರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನವೂ ಅವ ರು ಕಲಶವನ್ನು ತಂದಿದ್ದರು. ಆದರೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ.

ಶಂಕಿತನ ಗುರುತು ಪತ್ತೆ:

ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಳ್ಳ ಕಲಶವನ್ನು ಕದಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶಂಕಿತನನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸ ಲಾಗುವುದು ಎದು ಹೇಳಿದ್ದಾರೆ.

ಸೆ 9 ವರೆಗೆ ಕಾರ್ಯಕ್ರಮ:

ಕೆಂಪು ಕೋಟೆ ಸಂಕೀರ್ಣದಲ್ಲಿರುವ ಜೈನ ಸಮುದಾಯದ ಆಚ ರಣೆ ಆಗಸ್ಟ್ 15 ರಿಂದ ಉದ್ಯಾನವನದಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 9 ರವರೆಗೆ ಮುಂದುವರಿಯಲಿದ್ದು ಇದರ ನಡುವೆ ಈ ಘಟನೆ ನಡೆದಿದ್ದು ಕಾರ್ಯಕ್ರಮ ಆಯೋಜಕರು ತಲೆ ತ ಗ್ಗಿಸುವಂತಾಗಿದೆ.

1 ಕೋಟಿ ಮೌಲ್ಯದ ಕಲಶ:

ಕಳವು ಮಾಡಿದ ಕಲಶವು ಸುಮಾರು 1 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು ಎಂದು ಹೇಳಲಾಗುತ್ತಿದೆ. ಇಡೀ ಕಲಶವು ಚಿನ್ನ ಮತ್ತು ವಜ್ರಗಳಿಂದ ಕೂಡಿದ್ದು, ಇದನ್ನು 760 ಗ್ರಾಂ ಚಿನ್ನದಿಂದ ಮಾಡಲಾಗಿತ್ತು. ಕಲಶದ ಮೇಲೆ 150 ಗ್ರಾಂ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆ ಹರಳುಗಳನ್ನು ಹೊದಿಸಲಾಗಿತ್ತು ಎಂದು ಹೇಳಲಾಗಿದೆ.

ಭದ್ರತಾ ಲೋಪ:

ಒಂದು ಕೋಟಿ ಮೌಲ್ಯದ ಕಲಶ ಕಳ್ಳತನ ನಡೆದಿರುವ ಜೊತೆಗೆ ಕೆಂಪುಕೋಟೆಯಲ್ಲಿ ಭದ್ರತಾಲೋಪದ ಮಾತುಗಳು ಕೇಳಿಬಂದಿದ್ದು ಅಷ್ಟು ಮಾತ್ರವಲ್ಲದೆ ಆಗಸ್ಟ್ 2 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ನಡೆಸಲಾದ ಅಣ ಕು ಡ್ರಿಲ್ ಕಾರ್ಯಾಚರಣೆಯಲ್ಲೂ ಭದ್ರತಾ ಸಿಬ್ಬಂದಿಗಳು ಲೋಪ ಎಸಗಿದ್ದು ಇದರ ಪರಿಣಾಮ ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿತ್ತು ಇದೀಗ ಮತ್ತೊಂದು ದೊಡ್ಡ ಮ ಟ್ಟದ ಭದ್ರತಾ ಲೋಪ ನಡೆದಿರುವುದು ಕೆಂಪುಕೋಟೆಯ ಭದ್ರ ತೆಯ ಬಗ್ಗೆ ಹಲವು ಅನುಮಾನಗಳು ಹುಟ್ಟುಹಾಕುವಂತಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117