ದೇಶ

ಅಗ್ನಿಪಥ್: ಅಗ್ನಿವೀರರ ಸೇವಾ ಅವಧಿ 4ರಿಂದ 6 ವರ್ಷಕ್ಕೆ ಏರಿಕೆ!!

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಜಾರಿಯಲ್ಲಿರುವ ‘ಅಗ್ನಿಪಥ್‘ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯ ಅತ್ಯಂತ ಮಹತ್ವದ ಬದಲಾವಣೆಯನ್ನು ಘೋಷಿಸಿದೆ.

4 ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿ ಹೊರಬರಬೇಕಾಗಿದ್ದ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿ 2 ವರ್ಷಗಳ ಸೇವಾ ಅವಧಿ ವಿಸ್ತರಣೆ ನೀಡುವುದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಎನ್.ಎಸ್. ರಾಜ ಸುಬ್ರಮಣ್ಯಂ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

2022ರ ಜೂನ್ 14 ರಂದು ಆರಂಭವಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್ ಅಗ್ನಿವೀರರು ತಮ್ಮ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಈ ನಿರ್ಧಾರದಿಂದಾಗಿ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಅಗ್ನಿವೀರ ಯುವಕರಿಗೆ ಭಾರಿ ಲಾಭವಾಗಲಿದ್ದು, ದೇಶದ ರಕ್ಷಣಾ ಪಡೆಗಳಿಗೆ ಅನುಭವಸ್ಥ ಯುವ ಸೈನಿಕರ ಸೇವೆ ಮುಂದುವರಿಯಲಿದೆ.

ಪ್ರಸ್ತುತ ಇರುವ ನಿಯಮಾವಳಿಯಂತೆ, ಅರ್ಹತೆಯ ಆಧಾರದ ಮೇಲೆ ಗರಿಷ್ಠ ಶೇ. 25ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳ ಕಾಯಂ ಸೇವೆಗೆ ನಿಯೋಜಿಸಿಕೊಳ್ಳಲಾಗುತ್ತದೆ. ಇನ್ನುಳಿದ ಶೇ. 75ರಷ್ಟು ಅಗ್ನಿವೀರರು 4 ವರ್ಷಗಳ ಸೇವೆ ಮುಗಿಸಿ ಹೊರಹೋಗಬೇಕಿತ್ತು. ಆದರೆ, ಹೊಸ ಆದೇಶದ ಪ್ರಕಾರ ಈ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ 2 ವರ್ಷ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.

2 ವರ್ಷಗಳ ಹೆಚ್ಚುವರಿ ಅವಧಿ ಪೂರ್ಣಗೊಂಡ ನಂತರ, ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಇಚ್ಛಿಸುವ ಎಲ್ಲಾ ಅರ್ಹ ಅಗ್ನಿವೀರರನ್ನು ನಿಗದಿತ ವಸ್ತುನಿಷ್ಠ ಆಯ್ಕೆ ಮಾನದಂಡಗಳ ಆಧಾರದ ಮೇಲೆ ಸಶಸ್ತ್ರ ಪಡೆಗಳ ಖಾಯಂ ಹುದ್ದೆಗಳಿಗೆ ಸೇರಿಸಿಕೊಳ್ಳಲು ಪರಿಗಣಿಸಲಾಗುವುದು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಒಮರ್‌ ಅಬ್ದುಲ್ಲಾ ವೈವಾಹಿಕ ಜೀವನಕ್ಕೆ! ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಜೊತೆ ಹೊಸ ಜೀವನ ಆರಂಭಿಸಿದ ಜಮ್ಮು ಕಾಶ್ಮೀರ ಸಿಎಂ

ಜಮ್ಮು-ಕಾಶ್ಮೀರ ಸಿಎಂ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಹಿರಿಯ ನಾಯಕ ಒಮರ್‌ ಅಬ್ದುಲ್ಲಾ…