ಅಪರಾಧ

ಹಾಸಿಗೆ ಹಿಡಿದಿದ್ದ ಅಂಗವಿಕಲ ಮಗಳ ಕುತ್ತಿಗೆಗೆ ಕಡಿದು, ನೇಣಿಗೆ ಶರಣಾದ ತಾಯಿ!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸಿಗೆ ಹಿಡಿದಿದ್ದ ಅಂಗವಿಕಲ ಮಗಳನ್ನು ಕತ್ತಿಯಿಂದ ಕಡಿದು ಕೊಲೆಗೈದು ತಾಯಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಗ್ರಾಮದ ಕೊರಗ ಕಾಲನಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಶಾನಾಡಿ ನಿವಾಸಿ ಸುಧಾಕರ ಕೊರಗ ಅವರ ಪತ್ನಿ ನೇತ್ರಾವತಿ (40) ಹಾಗೂ ಪುತ್ರಿ ಸುಪ್ರತಿ (14) ಮೃತರು. ಕೊರಗ ಸಮುದಾಯಕ್ಕೆ ಸೇರಿದವರಾಗಿದ್ದು, ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು.

ಮಗಳು ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದು, ನಡೆಯಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದಳು. ಇದರಿಂದ ಮಗಳ ಆರೈಕೆಯನ್ನು ಮಾಡುವುದೇ ತಾಯಿಗೆ ದೊಡ್ಡ ತೊಂದರೆಯಾಗಿತ್ತು. ದಂಪತಿಗೆ ಒಂದು ವರ್ಷದ ಗಂಡು ಮಗುವೂ ಇದೆ. ಭಾನುವಾರ ಬೆಳಗ್ಗೆ ಗಂಡ ಸುಧಾಕರ ಕೆಲಸಕ್ಕೆ ಹೋದ ಬಳಿಕ ಪತ್ನಿ ನೇತ್ರಾವತಿ, ಮಗಳನ್ನು ಕುತ್ತಿಗೆ ಕಡಿದು ಸಾಯಿಸಿ ತಾನೂ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಕುಂದಾಪುರ ಉಪ ವಿಭಾಗದ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 121