tamanvi
ಅಪರಾಧ

ಮದ್ಯಕ್ಕಾಗಿ ತಂದೆ ಮಗಳನ್ನು ಹತ್ಯೆಗೈದ ವ್ಯಕ್ತಿ!

D_shiva_bhat
ಮದ್ಯ ಖರೀದಿಸಲು ರಾತ್ರಿಯಿಡೀ ಕಾಯುತ್ತಿದ್ದ ನಂತರ ಹತಾಶೆಗೊಂಡ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಗೈದಿದ್ದಾನೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವರ್ಜೀನಿಯಾ: ಅಮೆರಿಕದ ಡಿಪಾರ್ಟ್‌ಮೆಂಟ್ ಸ್ಟೋರ್ ಹೊರಗೆ ಗುಜರಾತಿ ತಂದೆ-ಮಗಳ ಹತ್ಯೆ ಪ್ರಕರಣವು ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಮದ್ಯ ಖರೀದಿಸಲು ರಾತ್ರಿಯಿಡೀ ಕಾಯುತ್ತಿದ್ದ ನಂತರ ಹತಾಶೆಗೊಂಡ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಗೈದಿದ್ದಾನೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

maithri

ಶುಕ್ರವಾರ ಬೆಳಗ್ಗೆ 5:30 ಕ್ಕೆ (ಸ್ಥಳೀಯ ಸಮಯ) ಅಂಗಡಿ ತೆರೆಯುತ್ತಿದ್ದಾಗ ಆಫ್ರಿಕನ್-ಅಮೆರಿಕನ್ ವ್ಯಕ್ತಿಯೊಬ್ಬ ಕೃತ್ಯ ಎಸಗಿದ್ದು, 26 ವರ್ಷದ ಪುತ್ರಿ ಮತ್ತು 56 ವರ್ಷದ ಪ್ರದೀಪ್‌ಭಾಯ್ ಪಟೇಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಪುತ್ರಿ ಉರ್ಮಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಿದ ನಂತರ ಮೃತಪಟ್ಟಿದ್ದಾರೆ ಎಂದು ಗುಜರಾತ್‌ನಲ್ಲಿರುವ ಕುಟುಂಬ ಭಾನುವಾರ ಸುದ್ದಿಗಾರರಿಗೆ ತಿಳಿಸಿದೆ.

ಜಾರ್ಜ್ ಪ್ರೇಜಿಯರ್ ಡೆವೊನ್ ವಾರ್ಟನ್ ಎಂಬಾತ ರಾತ್ರಿಯಿಡೀ ಡಿಪಾರ್ಟಮೆಂಟ್ ಸ್ಟೋರ್ ಸುತ್ತ ಹೊಂಚು ಹಾಕಿದ್ದರು. ಪ್ರದೀಪ್ ಮತ್ತು ಉರ್ಮಿ ಅವರು ತಮ್ಮ ಅಂಗಡಿಯ ಬಾಗಿಲು ತೆರೆಯಲೆಂದು ಬಂದಾಗ, ಅಂಗಡಿಯನ್ನು ಏಕೆ ಮುಚ್ಚಲಾಗಿದೆ ಎಂದು ಪ್ರಶ್ನಿಸಿ ಕೃತ್ಯ ಎಸಗಿದ್ದಾನೆ.

ಆರು ವರ್ಷಗಳ ಹಿಂದೆ, ಪ್ರದೀಪ್‌ಭಾಯ್ ಮತ್ತು ಅವರ ಪತ್ನಿ ಹಂಸ ಬೆನ್ ಅವರು ಕಿರಿಯ ಪುತ್ರಿ ಉರ್ವಿ ಜತೆ ಸಂದರ್ಶಕ ವೀಸಾದಲ್ಲಿ ಅಮೆರಿಕಕ್ಕೆ ಹೋಗಿದ್ದರು. ಪ್ರದೀಪ್‌ ಅವರ ಇನ್ನೋರ್ವ ಪುತ್ರಿ ಕೆನಡಾದಲ್ಲಿ ವಾಸಿಸುತ್ತಿದ್ದು, ಇನ್ನೊಬ್ಬ ಪುತ್ರಿ ವಿವಾಹಿತಳಾಗಿ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ. ಘಟನೆಯ ಪುತ್ರಿ ಮತ್ತು ಅಳಿಯ ಅಹಮದಾಬಾದ್‌ನಿಂದ ವಿಮಾನದಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಘಟನೆ ನಡೆದ ಎರಡು ಗಂಟೆಗಳ ಒಳಗೆ ಅಮೆರಿಕದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117