tamanvi
ವಾಣಿಜ್ಯ ವಾರ್ತೆ

ನೈಸರ್ಗಿಕ ಸುವಸ್ತುಗಳ ಹೈಜಿನಿಕ್ ಉತ್ಪನ್ನ ವಿಜಯ ಡೈಮಂಡ್ ಪಶು ಆಹಾರ | ಪುತ್ತೂರಿನ ಶ್ರೀ ವರದರಾಜ್ ಬಜಾರ್’ನಲ್ಲಿ 50 ಕೆಜಿ ವಿಜಯ ಡೈಮಂಡ್ ಪಶು ಆಹಾರ ಖರೀದಿಗೆ ಮಧೂರ್ ಸಕ್ಕರೆ ಉಚಿತದ ಜೊತೆಗೆ ಆಕರ್ಷಕ ಆಫರ್’ಗಳು

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮನುಷ್ಯನ ಆಹಾರದಷ್ಟೇ ಪ್ರಾಮುಖ್ಯತೆ ಪಶುಗಳ ಆಹಾರಕ್ಕೂ ಇದೆ. ಹಾಗಾಗಿ ನೈಸರ್ಗಿಕ ಹಾಗೂ ಹೈಜಿನಿಕ್ ಪಶು ಆಹಾರಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಈ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಂತಿರುವುದು ವಿಜಯ ಡೈಮಂಡ್ ಪಶು ಆಹಾರ.

ವಿಜಯ ಫೀಡ್ಸ್ ಸಂಸ್ಥೆ ವಿಜಯ ಡೈಮಂಡ್ ಪಶು ಆಹಾರವನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೆಬ್ರಿಯಲ್ಲಿ ಪ್ಲಾಂಟ್ ಹೊಂದಿದ್ದು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ರೈತರ ಮನೆಮಾತಾಗಿದೆ.

ಪಶು ಸಂಗೋಪನೆ ವಾಣಿಜ್ಯೀಕರಣವಾಗಿ ಬೆಳೆದಿರುವ ಇಂದಿನ ದಿನದಲ್ಲಿ ಸಂತಾನೋತ್ಪತ್ತಿಯಿಂದ ಹಿಡಿದು ಹಾಲಿನವರೆಗೆ ಎಲ್ಲವೂ ಲೆಕ್ಕಚಾರದಿಂದಲೇ ಕೂಡಿರುತ್ತದೆ. ಒಂದು ಆರೋಗ್ಯವಂತ ಹಸು ವರ್ಷಕ್ಕೊಂದು ಕರುವಿಗೆ ಜನ್ಮ ನೀಡಬೇಕು. ಹಾಲಿನಲ್ಲಿ FAT & SNF ಅಂಶಗಳು ಹೆಚ್ಚಾಗಿ ಇರಬೇಕು ಮೊದಲಾದ ವಿಚಾರಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಈ ಎಲ್ಲಾ ವಿಷಯಗಳನ್ನು ಲೆಕ್ಕ ಹಾಕಿ ನೋಡಿದಾಗ, ವಿಜಯ ಡೈಮಂಡ್ ಪಶು ಆಹಾರ ಉತ್ತಮ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗಿದೆ.

ಲೀಟರ್ ನೀರಿಗೆ 400 ಗ್ರಾಂನಷ್ಟು ವಿಜಯ ಡೈಮಂಡ್ ಪಶು ಆಹಾರವನ್ನು ಬೆರೆಸಿ ದನಗಳಿಗೆ ನೀಡಬಹುದು. ಇನ್ನು ದನ ಹಾಲು ನೀಡುವುದನ್ನು ನೋಡಿಕೊಂಡು ಅದಕ್ಕೆ ಅನುಗುಣವಾಗಿ ಪಶು ಆಹಾರವನ್ನು ಬೆರೆಸಬೇಕು ಎನ್ನುತ್ತಾರೆ ಸಂಸ್ಥೆಯ ತಜ್ಞರು.

ಪಶುಗಳಿಗೆ ಆರೋಗ್ಯ, ರೈತರಿಗೆ ಆದಾಯ:

ವಿಜಯ ಡೈಮಂಡ್ಸ್ ಪಶು ಆಹಾರವನ್ನು ಸಂಪೂರ್ಣ ಹೈಜಿನಿಕ್ ಆಗಿಯೇ ತಯಾರಿಸಲಾಗುತ್ತದೆ ಎನ್ನುವುದು ವಿಶೇಷ. ಅಂದರೆ ಆಹಾರ ತಯಾರಿಕೆಯಿಂದ ಕೊನೆಗೆ ಪ್ಯಾಕಿಂಗ್ ವರೆಗೆ ಎಲ್ಲಿಯೂ ಮನುಷ್ಯರ ಸ್ಪರ್ಶ ಇರುವುದೇ ಇಲ್ಲ. ಬದಲಾಗಿ ಯಂತ್ರೋಪಕರಣಗಳ ಮೂಲಕವೇ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ. ಪರಿಣಾಮ, ವಿಜಯ ಡೈಮಂಡ್ ಪಶು ಆಹಾರ ಸಂಪೂರ್ಣವಾಗಿ ಹೈಜಿನಿಕ್ ಆಗಿರುತ್ತದೆ.

ಸಂಪೂರ್ಣ ವೆಜಿಟೇರಿಯನ್ ಸುವಸ್ತುಗಳಿಂದಲೇ ತಯಾರಿಸುವ ಈ ಪಶುಆಹಾರ, ರಾಸಾಯನಿಕ ಮುಕ್ತ ಎನ್ನುವುದು ಮತ್ತೊಂದು ವಿಶೇಷ. ನೈಸರ್ಗಿಕ ಪದಾರ್ಥಗಳಿಂದಲೇ ತಯಾರಾಗುವ ವಿಜಯ ಡೈಮಂಡ್ ಪಶುಆಹಾರ, ಪಶುಗಳಿಗೆ ಆರೋಗ್ಯದಾಯಕ, ರೈತರಿಗೆ ಆದಾಯ ವರ್ಧಕ.

ಗಮನ ಸೆಳೆಯುವ ಆಫರ್:

ವಿಜಯ ಡೈಮಂಡ್ ಪಶುಆಹಾರ ಖರೀದಿಯ ಮೇಲೆ ಗಮನ ಸೆಳೆಯುವ ಆಫರನ್ನು ನೀಡಲಾಗಿದೆ. 50 ಕೆಜಿ ವಿಜಯ ಡೈಮಂಡ್ ಪಶು ಆಹಾರ ಖರೀದಿಸಿದರೆ 1 ಕೆಜಿ ಮಧೂರ್ ಶುಗರ್ (ಸಕ್ಕರೆ) ಅನ್ನು ನೀವು ಉಚಿತವಾಗಿ ಪಡೆದುಕೊಳ್ಳುತ್ತೀರಿ.

ವಿಜಯ ಡೈಮಂಡ್ ಪಶು ಆಹಾರದ ಅಧಿಕೃತ ಡೀಲರ್ ಆಗಿ ಪುತ್ತೂರಿನ ಎಪಿಎಂಸಿ ರಸ್ತೆಯ ವರದರಾಜ್ ಆರ್ಕೇಡ್’ನ ಶ್ರೀ ವರದರಾಜ್ ಬಜಾರ್ ಮಾಲಕರಾದ ವೆಂಕಟ್ರಮಣ ನಾಯಕ್ ಇಂದಾಜೆ ಅವರು ಪಡೆದುಕೊಂಡಿದ್ದು, ಬಲ್ಕ್ ಆರ್ಡರ್ ನೀಡಿದವರಿಗೆ 10 ಕಿಲೋ ಮೀಟರ್ ಆಸುಪಾಸಿನಲ್ಲಿ ಡೆಲಿವರಿ ವ್ಯವಸ್ಥೆ, ಹೋಲ್ ಸೇಲ್ ಧಾರಣೆ ಗ್ರಾಹಕರನ್ನು ಸೆಳೆಯುತ್ತಿದೆ. ಹೆಚ್ಚಿನ ಮಾಹಿತಿಗೆ 96861 22477 ಸಂಪರ್ಕಿಸಬಹುದು.

ಉತ್ತಮ ಖನಿಜಾಂಶ, ಪ್ರೋಟಿನ್ ಯುಕ್ತ ಪಶುಆಹಾರ

ವಿಜಯ ಡೈಮಂಡ್ ಪಶುಆಹಾರವನ್ನು ಪಶುಗಳಿಗೆ ನೀಡುವುದರಿಂದ ಉತ್ತಮ ಖನಿಜಾಂಶ, ಉತ್ತಮ ಪ್ರೊಟೀನ್ ಹಸುಗಳಿಗೆ ಸಿಗುತ್ತವೆ. ಇದರಿಂದಾಗಿ ಉತ್ತಮ ಹಾಲಿನ ಇಳುವರಿ ಹಾಗೂ ಉತ್ತಮ ಬೆಣ್ಣೆಯ ಅಂಶವನ್ನು ಅವು ನೀಡುತ್ತವೆ. ಮಾತ್ರವಲ್ಲ, ಸಂತಾನೋತ್ಪತ್ತಿಯ ಪ್ರಕ್ರಿಯೆಗೂ ಇದು ಉತ್ತಮ ಎನ್ನುವುದು ಸಾಬೀತಾಗಿದೆ.

ರವಿಕಿರಣ್, ಮಾಲಕರು, ವಿಜಯ ಫೀಡ್ಸ್


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಿಟ್ಲ, ಉಪ್ಪಿನಂಗಡಿ, ಮಾಡಾವು, ಕುಂಬ್ರ, ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕಾರ್ಯಕಾರಿ ಸಮಿತಿ ಸಭೆ

ಪುತ್ತೂರು: ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇದರ ನೇತೃತ್ವದಲ್ಲಿ ಪುತ್ತೂರು…

ಟೈಮ್ಸ್ ವ್ಯಾಪಾರ ಪ್ರಶಸ್ತಿ–2026: ಗೃಹ ನಿರ್ಮಾಣ ಕ್ಷೇತ್ರದಲ್ಲಿ ಯು ಆರ್ ಪ್ರಾಪರ್ಟೀಸ್‌ಗೆ ವರ್ಷದ ಶ್ರೇಷ್ಠ ಗೌರವ

ಮಂಗಳೂರು: ನಗರದ ಅವತಾರ್ ಹೋಟೆಲ್‌ನಲ್ಲಿ ನಡೆದ ಟೈಮ್ಸ್ ವ್ಯಾಪಾರ ಪ್ರಶಸ್ತಿ–2026 ಸಮಾರಂಭದಲ್ಲಿ…

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ನೆಹರುನಗರದಲ್ಲಿ ಇಂದು ಶುಭಾರಂಭ

ಪುತ್ತೂರು: ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ…