ಪುತ್ತೂರು: ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 21ನೇ ಶಾಖೆ ನೆಹರುನಗರದ ಕಲ್ಲೇಗ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ಜೂನ್ 29ರಂದು ಸಂಜೆ 4.30ಕ್ಕೆ ಶುಭಾರಂಭಗೊಳ್ಳಲಿದೆ.
ನೂತನ ಶಾಖಾರಂಭದ ಪ್ರಯುಕ್ತ ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ ಮಾಡುವ ಘೋಷಣೆಯನ್ನು ಸಂಸ್ಥೆ ಮಾಡಿದೆ. 2026ರ ಜೂನ್ 15ರಂತೆ ಸಹಕಾರಿಯ ಅಂಕಿಅಂಶಗಳು ಹೀಗಿವೆ – 52920 ಸದಸ್ಯರು, 10.25 ಕೋಟಿ ರೂ. ಪಾಲು ಬಂಡವಾಳ, 422 ಕೋಟಿ ರೂ. ಠೇವಣಿ, 468 ಕೋಟಿ ರೂ. ದುಡಿಯುವ ಬಂಡವಾಳ, 823 ಕೋಟಿ ರೂ. ವ್ಯವಹಾರ ನಡೆಸಿದ್ದು, 401 ಕೋಟಿ ರೂ. ಸಾಲ ನೀಡಿದೆ. 45.77 ಕೋಟಿ ರೂ. ಸ್ವಂತ ನಿಧಿ ಹೊಂದಿದ್ದು, 7.27 ಕೋಟಿ ರೂ. ಲಾಭದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.
ಸಹಕಾರಿಯ 22ನೇ ಶಾಖೆ ಮಂಗಳೂರು ತಾಲೂಕಿನ ಉಳ್ಳಾಲ ಹಾಗೂ 23ನೇ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ., ವ್ಯವಸ್ಥಾಪಕ ಶಿವಪ್ರಸಾದ್ ಪೆರುವಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















