tamanvi
ದೇಶಪ್ರಚಲಿತರಾಜ್ಯ ವಾರ್ತೆ

6 ದಿನಗಳಲ್ಲಿ 70 ಹುಸಿ ಬಾಂಬ್ ಬೆದರಿಕೆ: ಸಿಇಒಗಳ ಸಭೆ ಕರೆದ ವಿಮಾನಯಾನ ಭದ್ರತಾ ಸಂಸ್ಥೆ!!

ಭಾರತೀಯ ವಿಮಾನಗಳಿಗೆ ಕಳೆದ 6 ದಿನಗಳಲ್ಲಿ 70 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ Bureau of Civil Aviation Security (BCAS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಕರೆದು ಮಾತುಕತೆ ನಡೆಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಭಾರತೀಯ ವಿಮಾನಗಳಿಗೆ ಕಳೆದ 6 ದಿನಗಳಲ್ಲಿ 70 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ Bureau of Civil Aviation Security (BCAS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ಕರೆದು ಮಾತುಕತೆ ನಡೆಸಿದೆ.

ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಸೃಷ್ಟಿಸುವ ಮತ್ತು ವಿಮಾನಯಾನ ಸಂಸ್ಥೆಗಳಿಗೆ ನಷ್ಟ ಉಂಟು ಮಾಡುವ ಬೆದರಿಕೆಗಳನ್ನು ನಿಭಾಯಿಸಲು ಸ್ಟಾಂಡರ್ಡ್ ಆಪರೇಟಿಂಗ್ ವಿಧಾನ(ಎಸ್‌ಒಪಿ) ಅನುಸರಿಸಲು ಸಿಇಒಗಳಿಗೆ ತಿಳಿಸಿದ್ದಾರೆ.

ಶನಿವಾರ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 30ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬೆದರಿಕೆ ಕರೆಗಳು ಬಂದಿತ್ತು. ಕಳೆದ ವಾರ ಭಾರತೀಯ ವಿಮಾನಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಹುಸಿ ಬಾಂಬ್ ಕರೆಗಳ ಐಪಿ ಅಡ್ರೆಸ್ ಗಳು ಲಂಡನ್ ಮತ್ತು ಜರ್ಮನಿಯಲ್ಲಿರುವುದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

1 of 122