ಗೆಜ್ಜೆಗಿರಿ ನಂದನ ಬಿತ್ತ್'ಲ್'ನಲ್ಲಿ ಸೋಮವಾರ ದೈವಗಳ ನೇಮೋತ್ಸವ ಜರಗಿತು.
ಗೆಜ್ಜೆಗಿರಿ ನಂದನ ಬಿತ್ತ್'ಲ್'ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಧೂಮಾವತಿ ನೇಮ ಹಾಗೂ ಧೂಮಾವತಿ ಬಲಿ ಉತ್ಸವ ಜರಗಿತು.
ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತಿಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.2 ರಿಂದ ಪ್ರಾರಂಭಗೊಂಡು ಮಾ.5 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಪವಿತ್ರ ರಂಝಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ ಮಾ.2ರಿಂದ ರಾಜ್ಯಾದ್ಯಂತ ಉಪವಾಸ ವ್ರತ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮನ್ಸೂದ್ ಇಮ್ರಾನ್ ರಶಾದಿ ತಿಳಿಸಿದರು.
ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್ ಯೋಗ ಸಮಿತಿಯ ಸಹಕಾರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರ ನಡೆಯಿತು.
ಬನ್ನೂರು ಸ್ಫೂರ್ತಿ ಯುವಕ – ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾದ 35ನೇ ವಾರ್ಷಿಕೋತ್ಸವ ಇತ್ತೀಚೆಗೆ ಬನ್ನೂರು ಶನೀಶ್ವರ ಸನ್ನಿಧಿಯ ಸ್ಫೂರ್ತಿ ವೇದಿಕೆಯಲ್ಲಿ ಜರಗಿತು.
ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.
ಬನ್ನೂರಿನ ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ದೇವಿ ದರ್ಶನ ನಡೆಯಿತು.
ಬನ್ನೂರಿನ ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.22ರಂದು ರಾತ್ರಿ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.
Welcome, Login to your account.
Welcome, Create your new account
A password will be e-mailed to you.