ಅತೀ ವೇಗವಾಗಿ ಬಂದ ಎಸ್ ಯುವಿಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು
ರಾಮ್ ಚರಣ್ ನಿರ್ಮಾಣದ ಹೊಸ ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಸಹಾಯಕ ಛಾಯಾಗ್ರಾಹಕ ಮತ್ತು ಇತರ ಹಲವಾರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಕಾಂತಾರ ಚಲನಚಿತ್ರದ ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ. ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆ…
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಮತ್ತು ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರ ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ (ಜೂ.10) ನಿಧನವಾಗಿದೆ.
ಟ್ರಕ್ಕಿಂಗ್‌ಗೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ನಡೆದಿದೆ.
ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಪೋಟವೊಂದು ಸಂಭವಿಸಿರುವುದಾಗಿ ರಕ್ಷಣಾ ಪಡೆ PRO ತಿಳಿಸಿದೆ. ಕೇರಳದ ಕರಾವಳಿಯಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಟ್ರೈನ್‌ನಿಂದ ಹಳಿಗೆ ಬಿದ್ದು ಐವರು ಪ್ರಯಾಣಿಕರು ಮೃತಪಟ್ಟ ಘಟನೆ ಮುಂಬೈನಲ್ಲಿ ಸೋಮವಾರ (ಜೂ.09) ನಡೆದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಹೋಗುತ್ತಿದ್ದ ರೈಲಿನಿಂದ ಪ್ರಯಾಣಿಕರು ಹಳಿಗೆ ಬಿದ್ದಿದ್ದಾರೆ.
ಕೆಡೆಂಬೇಲು ನಿವಾಸಿ ಜಯಾನಂದ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (21) ಮೃತಪಟ್ಟವರು.
ತಂದೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು, ಒಂದೂವರೆ ವರ್ಷದ ಪುಟ್ಟ ಕಂದ ಸಾವನ್ನಪ್ಪಿರುವ ಘಟನೆ ಮುಳ್ಳೇರಿಯಾದಲ್ಲಿ ನಡೆದಿದೆ. ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಬರ್ಚಿನಹಳ್ಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂ.7ರಂದು ಮುಂಜಾನೆ ಸಂಭವಿಸಿದೆ.
Welcome, Login to your account.
Welcome, Create your new account
A password will be e-mailed to you.