ಅಪಘಾತ

ಅರಿಯಡ್ಕ: ಮನೆ ಮೇಲೆ ಬಿದ್ದ ಬೃಹತ್ ಬೀಟೆ ಮರ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅರಿಯಡ್ಕ ಗ್ರಾಮದ ನೇರೋಳ್ತಡ್ಕದಲ್ಲಿ ಮನೆಯೊಂದಕ್ಕೆ ಬೃಹತ್ ಗಾತ್ರದ ಮರ ಬಿದ್ದು, ಹಾನಿಯಾದ ಬಗ್ಗೆ ವರದಿಯಾಗಿದೆ.

chennai-shopping
maithri

ನೇರೋಳ್ತಡ್ಕದ ಕೂಲಿ ಕಾರ್ಮಿಕೆಯ ಜಯಂತಿ ಅವರ ಮನೆಗೆ ಮಂಗಳವಾರ ಬೆಳಿಗ್ಗೆ ಬೃಹತ್ ಗಾತ್ರದ ಬೀಟೆ ಮರ ಬಿದ್ದಿದೆ.

ಮರ ಬಿದ್ದು ಮನೆಗೆ ಹಾನಿಯಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮನೆ ಮೇಲೆ ಅಳವಡಿಸಿದ್ದ ಶೀಟ್ ಪೂರ್ಣ ಹಾನಿಯಾಗಿದೆ. ಮನೆಯೊಳಗಡೆಯಿದ್ದ ಜಯಂತಿ ಹಾಗೂ ಅವರ ಮಕ್ಕಳಾದ ಧನ್’ರಾಜ್, ಚೇತನ್’ರಾಜ್ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರು ಮರ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts