tamanvi
ಅಪಘಾತ

ಬಂಟ್ವಾಳ: ರಸ್ತೆ ಬದಿ ಹೊಂಡದಲ್ಲಿ ಯುವಕನ ಮೃತದೇಹ ಪತ್ತೆ!!

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಬೆಂಜನಪದವಿನ ಅಮ್ಮುಂಜೆ ನಿವಾಸಿ ಜನಾರ್ಧನ್ ಪೂಜಾರಿ ಎಂಬವರ ಮಗ ಸಾಗರ್ (28) ಪೈಟಿಂಗ್ ಮಾಡಿಕೊಂಡಿದ್ದು, ದಿನಾಂಕ 14.06.2025 ರಂದು ಮಗನು ಪತ್ನಿ ಬೇಬಿರವರೊಂದಿಗೆ ಬಿಸಿ ರೋಡ್ ಗೆ ಔಷಧವನ್ನು ಪಡೆಯಲು ಹೆಂಡತಿ ಮಕ್ಕಳೊಂದಿಗೆ ಆಟೋದಲ್ಲಿ ಹೋಗಿದ್ದವರು ವಾಪಸ್ ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಇಳಿದಿರುತ್ತಾರೆ. ಆ ಬಳಿಕ ನಾಪತ್ತೆಯಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದಿನಾಂಕ 16.06.2025 ರಂದು ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 16.06.2025 ರಂದು ಸಾಗರ್ (28)ರವರ ಮೃತದೇಹ ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್  ನಲ್ಲಿ ಕಂಡುಬಂದಿರುವುದಾಗಿ ದೂರುದಾರರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಮೃತದೇಹವನ್ನು ದೃಢಪಡಿಸಿರುತ್ತಾರೆ. ಸಾಗರ್ ರವರು ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ 23/2025 0 194 (3) (4) BNSS. ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts