tamanvi
ಪ್ರಚಲಿತ

ಕಾರ್ಪಾಡಿ: ಆರ್ಯಾಪು ಪ್ರೀಮಿಯರ್ ಲೀಗ್ (APL)ಗೆ ಚಾಲನೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಮೈದಾನದಲ್ಲಿ 2 ದಿನ ನಡೆಯುವ ಆರ್ಯಾಪು ಪ್ರೀಮಿಯರ್ ಲೀಗ್ (APL)ಗೆ ಶನಿವಾರ ಬೆಳಿಗ್ಗೆ ಸಂಪ್ಯ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಗಂಗಾಧರ ಅಮೀನ್ ಹೊಸಮನೆ ಚಾಲನೆ ನೀಡಿದರು.

maithri

ತೆಂಗಿನಕಾಯಿ ಒಡೆದು ಕ್ರೀಡಾಂಗಣ ಉದ್ಘಾಟಿಸಲಾಯಿತು. ಬಳಿಕ ಕ್ರಿಕೆಟ್ ಆಟಕ್ಕೆ ಚಾಲನೆ ದೊರೆಯಿತು‌.

ಎರಡು ದಿನ ನಡೆಯುವ ಎಪಿಎಲ್ ಪಂದ್ಯದಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಬಾನುವಾರ ಸಂಜೆ ಸಮಾರೋಪ ನಡೆದ ಬಳಿಕ ಆರ್ಯಾಪು ಮ್ಯೂಸಿಕಲ್ ನೈಟ್ಸ್ ನಡೆಯಲಿದೆ.

ಈ ಸಂದರ್ಭ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಸುರೇಶ್ ಪೆಲತ್ತಡಿ, ಶರತ್ ಆಳ್ವ ಕೂರೇಲು, ಸಂತೋಷ್ ಸುವರ್ಣ ಮೇರ್ಲ, ಬಾಲಚಂದ್ರ ದೇವಸ್ಯ, ಧನುಷ್ ಹೊಸ ಮನೆ, ಪವನ್ ಶೆಟ್ಟಿ ಕಂಬಳತ್ತಡ್ಡ ಮೊದಲಾದವರು ಉಪಸ್ಥಿತರಿದ್ದರು.

ಉಮೇಶ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ…