ಪುತ್ತೂರು: ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ಆರಾಧಿಸಲ್ಪಡುವ ದುರ್ಗೆಯ ವಾಹನ ಹುಲಿಯ ಕುಣಿತವನ್ನು ಸ್ಪರ್ಧೆಯ ರೂಪದಲ್ಲಿ ಪ್ರದರ್ಶಿಸುವ ಈ ವೇದಿಕೆ ಅತ್ಯಾಪೂರ್ವವಾದದ್ದು. ತುಳುನಾಡಿನ ಜನಪದ ಕ್ರೀಡೆಯ ಪ್ರದರ್ಶನಕ್ಕೆಪುತ್ತೂರಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ವಿಜಯ ಸಾಮ್ರಾಟ್ ತಂಡಕ್ಕೆ ಸಲ್ಲುತ್ತದೆ. ಪಿಲಿಗೊಬ್ಬು 1ನ್ನು ಮೀರಿದ ಯಶಸ್ಸು ಜನಸ್ಪಂದನೆ ಸೀಸನ್ 2ಕ್ಕೆ ಸಿಗಲಿ. ಆ ಮೂಲಕ ಈ ಆಯೋಜನೆ ಹತ್ತೂರಿಗೂ ಮಾದರಿಯಾಗಬೇಕು. ಇಂತಹದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಸಹಜ್ ಮತ್ತು ಬಳಗದ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉದ್ಯಮಿ ಉಜ್ವಲ್ ಪ್ರಭು ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪುತ್ತೂರು ಪಿಲಿಗೊಬ್ಬು ಸಮಿತಿ ವತಿಯಿಂದ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಸೀಸನ್ -2 ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ಫುಡ್ ಪೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಆಹಾರ ಮಳಿಗೆಗಳಿವೆ. ಉದ್ಘಾಟನೆಯ ಬಳಿಕ ಈ ಎಲ್ಲ ಆಹಾರ ಮಳಿಗೆಗಳಿಗೆ ಆಯೋಜಕರು ತೆರಳಿ ಸ್ಟಾಲ್ ಮಾಲಕರಿಗೆ ಶಲ್ಯ ತೊಡಿಸುವ ಮೂಲಕ ಗೌರವ ವ್ಯಕ್ತಪಡಿಸಿದರು. ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಅಧ್ಯಕ್ಷತೆ ವಹಿಸಿದ್ದರು.
ಪಾಪ್ಯುಲರ್ ನ್ಯೂಟ್ರಿಷಿಯಸ್‌ನ ನರೇಂದ್ರ ಕಾಮತ್, ಪುತ್ತೂರುದ ಪಿಲಿಗೊಬ್ಬು ಸಮಿತಿ ಸಂಚಾಲಕ ನಾಗರಾಜ ಭಟ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್ ಉಪಸ್ಥಿತರಿದ್ದರು. ಪುತ್ತೂರುದ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶರತ್ ಆಳ್ವ ಕೂರೆಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಹೀಗಿದೆ ಫುಡ್ ಫೆಸ್ಟ್:
ಪಕೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ ವಿಚ್, ಕೇರಳ ಹುಟ್ಟು ಲೈವ್ ಮಸಾಲೆ ದೋಸೆ, ಲೈವ್ ಹಲಸಿನ ಹೋಳಿಗೆ, ಲೈನ್ ರುಮಾಲಿ ರೊಟ್ಟಿ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ.
ಕಸ ಕಡ್ಡಿಗಳು ಮಾರ್ಗದಲ್ಲಿ ಅಥವಾ ಆಹಾರ ಮಳಿಗೆಗಳ ಸುತ್ತಮುತ್ತ ಕಸದ ಬುಟ್ಟಿಯಲ್ಲಿ ತುಂಬಿ ತುಳುಕದಂತೆ ಮುಂಜಾಗ್ರತೆಯನ್ನು ವಹಿಸಲಾಗುವುದು. ಒಟ್ಟಾರೆ ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 5,೦೦೦, ದ್ವಿತೀಯ ಬಹುಮಾನ 3೦೦೦, ತೃತೀಯ ಬಹುಮಾನ 2೦೦೦ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು, ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯ ಸಾಮ್ರಾಟ್ ಮತ್ತು ಪಿಲಿಗೊಬ್ಬು ಸಮಿತಿ ತಿಳಿಸಿದೆ.