tamanvi
ಪ್ರಚಲಿತ

ಯುದ್ಧ ನಿಲ್ಲಿಸಿದ್ರೆ ಮಾತ್ರ ಮಾತುಕತೆ: ಅಮೆರಿಕಕ್ಕೆ ಇರಾನ್! ಭಾರತಕ್ಕೆ ಎರಡು ಎಲ್‌ಪಿಜಿ ಹಡಗು; 18 ಹಡಗುಗಳಿಗೆ ಶೀಘ್ರ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಅಮೆರಿಕದ ಪ್ರಸ್ತಾಪಗಳಿಗೆ ಇರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಯುದ್ಧವನ್ನು ನಿಲ್ಲಿಸಿದರೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಇರಾನ್ ಅಮೆರಿಕಕ್ಕೆ ಖಡಕ್ಕಾಗಿ ಹೇಳಿದೆ.

ಈ ಸಂಬಂಧ ಇರಾನ್ ಮತ್ತು ಟರ್ಕಿ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ. ‘ಶಾಂತಿ ಮಾತುಕತೆಯ ನೆಪದಲ್ಲಿ ದಾಳಿ ಮಾಡಿ ಮಾಡಿದ ವಂಚನೆಯನ್ನು ನಾವು ಮರೆಯುವುದಿಲ್ಲ’ ಎಂದು ಇರಾನ್ ಗುಡುಗಿದೆ.

ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಭದ್ರತಾ ಮಂಡಳಿ ಹೊಸ ಕ್ರಮಗಳನ್ನು ಘೋಷಿಸಿದೆ. ಹಡಗುಗಳ ಸಂಚಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಈ ಪ್ರದೇಶದಲ್ಲಿ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಿದೆ.

ಭಾರತಕ್ಕೆ ಎರಡು ಎಲ್‌ಪಿಜಿ ಹಡಗು

ಟರ್ಕಿ ಈ ವಿಚಾರವಾಗಿ ವಿಶ್ವಸಂಸ್ಥೆಯೊಂದಿಗೂ ಚರ್ಚೆ ನಡೆಸಿದೆ. ಈಗಾಗಲೇ ಜಲಸಂಧಿಯನ್ನು ದಾಟಿದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಬರಲಿವೆ. ಇದಲ್ಲದೆ, ಇನ್ನೂ 18 ಹಡಗುಗಳಿಗೆ ಶೀಘ್ರದಲ್ಲೇ ಅನುಮತಿ ಸಿಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…