ಪ್ರಚಲಿತ

ನೇಪಾಳದ ಪ್ರಧಾನಿಯಾಗಿ ನಿಟ್ಟೆ ಮೀನಾಕ್ಷಿ ವಿವಿಯ ವಿದ್ಯಾರ್ಥಿ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಜೆನ್ ಝಿ ಗಲಭೆಯಿಂದ ಸರ್ಕಾರ ಪತನವಾಗಿದ್ದ ನೇಪಾಳಕ್ಕೆ 47ನೇ ಪ್ರಧಾನಿಯಾಗಿ ಮಾಜಿ ರ್ಯಾಪರ್ ಬಾಲೇಂದ್ರ ಶಾ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

maithri

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ವಿವಿಯಲ್ಲಿ ಬಾಲೇಂದ್ರ ಶಾ ಶಿಕ್ಷಣ ಪಡೆದಿದ್ದು, 35ನೇ ವಯಸ್ಸಿಗೆ ಪ್ರಧಾನಿಯಾಗುವ ಮೂಲಕ ನೇಪಾಳದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಬಾಲೇನ್ ಪಾತ್ರರಾಗಿದ್ದಾರೆ.

ಗುರುವಾರ ಬಾಲೇಂದ್ರ ಶಾ ಅವರನ್ನು ರಾಷ್ಟ್ರೀಯ ಸ್ವತಂತ್ರ ಪಕ್ಷವು ತನ್ನ ಸಂಸದೀಯ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಪಕ್ಷದ ಅಧ್ಯಕ್ಷೆ ರಬಿ ಲಮಿಚಾನೆ ಅವರು ಈ ಹುದ್ದೆಗೆ ಶಾ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸರ್ವಾನುಮತದ ಅನುಮೋದನೆ ದೊರಕಿತ್ತು.

ಇತ್ತೀಚೆಗೆ ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಪಿ (RSP) ಪಕ್ಷವು ಒಟ್ಟು 275 ಸ್ಥಾನಗಳಲ್ಲಿ 182ರಲ್ಲಿ ಭರ್ಜರಿ ಗೆಲುವು ಸಾಧಿಸಿ ಬಹುಮತ ಪಡೆದಿತ್ತು. ನೇಪಾಳದಲ್ಲಿ ಈ ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ವಿರೋಧಿಸಿ ಜೆನ್ ಝಿ ಹೋರಾಟ ನಡೆಸಿತ್ತು.

ಚುನಾವಣೆಯಲ್ಲಿ ಶಾ ಅಲಿಯಾಸ್ ಬಾಲೇನ್ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆಪಿ ಶರ್ಮಾ ಒಲಿ ಅವರನ್ನು ಪರಾಜಯಗೊಳಿಸಿ ಗೆಲುವು ಸಾಧಿಸಿದ್ದರು. ನೇಪಾಳ ಚುನಾವಣೆಯಲ್ಲಿ ಆರ್‌ಎಸ್‌ಪಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಸೋಲಿಸಿರುವ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿದ್ದೆ: ಸುದ್ದಿಗೋಷ್ಠಿಯಲ್ಲಿ ಅರಿವಿಲ್ಲದೇ ಮಾತನಾಡಿದ ಕೆಕೆಆರ್ ಆಟಗಾರ!!

ಐಪಿಎಲ್ ಟರ‍್ನಮೆಂಟ್ ಶುರುವಾಗುವ ಸಿದ್ಧತೆಯಲ್ಲಿದ್ದಾಗಲೇ ಕೆಕೆಆರ್ ಆಟಗಾರ ಬ್ರಾವೋ ಮಾತು ಇದೀಗ…