ಪ್ರಚಲಿತ

ಇಂದಿನಿಂದ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಕೊಂಬೆಟ್ಟು ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಜನರೇಟರ್’ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ.

ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಮತ್ತು ಜೀನ್’ಎಕ್ಸ್ ಬ್ರಾಂಡ್’ಗಳ ಜನರೇಟರ್’ಗಳ ಮಾಹಿತಿ ನೀಡುವ ಜೊತೆಗೆ ಪ್ರದರ್ಶನ ಹಾಗೂ ಖರೀದಿಗೂ ಜುಲೈ 31ರವರೆಗೆ ಅವಕಾಶ ಇದೆ.

ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಹಾಗೂ ಅಮೆರ್ ಎನ್.ಎಸ್.ಎಂ. ಇಂಡಿಯಾದ ರೀಜನಲ್ ಸೇಲ್ಸ್ ಮ್ಯಾನೇಜರ್ ಮಹೇಶ್ ಜೋಶಿ, ಕುಕ್ಕಿಲ ಎಂಟರ್’ಪ್ರೈಸಸ್ ಮಾಲಕರಾದ ವೆಂಕಟರಮಣ ಭಟ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಪಶುಪತಿ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಕೋನದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹ ಜನರೇಟರ್’ಗಳನ್ನು ಇಲ್ಲಿ ಕಾಣಲು ಸಾಧ್ಯ. ಪ್ರಮುಖವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕರಾವಳಿ ಭಾಗದ ಕೃಷಿ ಚಟುವಟಿಕೆ ಸೊರಗುತ್ತಿರುವ ಕೆಲ ಉದಾಹರಣೆಯೂ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಪರಿಹಾರದ ರೂಪದಲ್ಲಿ ಜನರೇಟರ್’ಗಳನ್ನು ಅನ್ವೇಷಿಸಿದ್ದು, ಕೃಷಿಕರ ಮುಂದೆ ಬರಲಿದೆ. ಇದಲ್ಲದೇ ಕನ್’ಸ್ಟ್ರಕ್ಷನ್ / ಫ್ಯಾಬ್ರಿಕೇಷನ್ / ಎಲೆಕ್ಟ್ರಿಕಲ್ ವೆಲ್ಡಿಂಗ್ ಕೆಲಸಗಳಿಗಾಗಿ, ಅಂಗಡಿ – ಮಳಿಗೆಗಳಿಗಾಗಿ, ದಿನಬಳಕೆ ಹಾಗೂ ಕೈಗಾರಿಕೆಗಳಿಗಾಗಿ ವಿವಿಧ ವಿನ್ಯಾಸದ ಜನರೇಟರ್’ಗಳು ಲಭ್ಯವಾಗಲಿದೆ.

ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್’ಗಳು ಅತ್ಯುತ್ತಮ ಗುಣಮಟ್ಟ, ದೀರ್ಘ ಬಾಳಿಕೆ, ಪವರ್ ಬ್ಯಾಕಪ್, 1 ವರ್ಷದ ವ್ಯಾರೆಂಟಿ, ಕಡಿಮೆ ಬೆಲೆ ನಮ್ಮೂರಿನಲ್ಲೇ ಲಭ್ಯವಾಗಲಿದೆ ಎನ್ನುವುದು ಇಲ್ಲಿನ ವಿಶೇಷತೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸುಪ್ತ ಪ್ರತಿಭೆ ಬೆಳಕಿಗೆ ತರಲು ಚಿತ್ರಕಲಾ ಸ್ಪರ್ಧೆ | ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ ಲಕ್ಷ್ಮೀಕಾಂತ್ ಬಿ. ಆಚಾರ್ಯ

ಪುತ್ತೂರು: ನಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸುವ ಕಲೆಯೇ…

ಪುತ್ತೂರಿನ ಹೈಟೆಕ್ ಬಸ್ ನಿಲ್ದಾಣದ ದಶಮಾನೋತ್ಸವ ಸಂಭ್ರಮ ಆಚರಣೆ | ಪುತ್ತೂರಿನ ಯೋಜನೆ ಬೆಳಗಾವಿಗೂ ಮಾದರಿ: ಶಾಸಕ ಅಶೋಕ್ ರೈ

ಪುತ್ತೂರು: ಕಟ್ಟಡ ನಿರ್ಮಾಣವಾದ ಬಳಿಕ, ಯಶಸ್ಸಾದ ಬಳಿಕ ಅನೇಕರು ಶಹಬ್ಬಾಶ್ ಹೇಳ್ತಾರೆ. ಆದರೆ ಏನೂ…