ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿರುವ ಚಿನ್ನಾಭರಣ ಮಳಿಗೆ ಶ್ರೀರತ್ನ ಜ್ಯುವೆಲ್ಸ್ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಅ. 21ರಂದು ಬೆಳಿಗ್ಗೆ ಲಕ್ಷ್ಮೀ ಪೂಜೆ ನಡೆಯಿತು.
ಕಳೆದ 23 ವರ್ಷಗಳಿಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಬಳಿಯಿರುವ ಮೇಧಾ ಬಿಲ್ಡಿಂಗಿನಲ್ಲಿ ಸ್ವರ್ಣಶ್ರೀ ಜ್ಯುವೆಲ್ಸ್, 4 ವರ್ಷಗಳ ಹಿಂದೆ ಸ್ವಂತ ಕಟ್ಟಡ ವಿಶ್ವ ಸಂಕೀರ್ಣಕ್ಕೆ ಶ್ರೀರತ್ನ ಜ್ಯುವೆಲ್ಸ್ ಹೆಸರಿನಲ್ಲಿ ಸ್ಥಳಾಂತರಗೊಂಡಿತ್ತು.
ರಾಜೇಶ್ ಪುರೋಹಿತ್ ಅವರು ಪೂಜಾ ವಿಧಿವಿಧಾನ ನೆರವೇರಿಸಿಕೊಟ್ಟರು. ಗಣ್ಯರು, ಅತಿಥಿಗಳು ಆಗಮಿಸಿ ಶುಭಹಾರೈಸಿದರು.
ಸಂಸ್ಥೆಯ ಮಾಲಕ ರಾಜೇಶ್ ಆಚಾರ್ಯ ಎನ್., ಮನೆಯವರು ಹಾಗೂ ಸಿಬ್ಬಂದಿಗಳು ಅತಿಥಿಗಳನ್ನು ಸ್ವಾಗತಿಸಿದರು.