ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ಕುಂಜೂರುಪಂಜ ಒಕ್ಕೂಟದ ಆಶ್ರಯದಲ್ಲಿ ದೇವಸ್ಯ ಶ್ರೀ ಮಂಜುನಾಥ ಸಬಾಭವನದಲ್ಲಿ ನೆಲ ಜಲ ಸಂರಕ್ಷಣೆ ಕುರಿತಾಗಿ ಕಾರ್ಯಕ್ರಮ ನಡೆಯಿತು.
ಮಹಾಲಿಂಗೇಶ್ವರ ಐ ಟಿ ಐ ಕಾಲೇಜಿನ ಉಪನ್ಯಾಸಕ ನಾರಾಯಣ ಮಾತನಾಡಿ, ಮುಂದಿನ ಪೀಳಿಗೆಗೆ ನೀರು ಉಳಿಸುವುದು ಅನಿವಾರ್ಯ ವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗ ನಾಯ್ಕ ವಹಿಸಿದ್ದರು.
ಬಳಿಕ ಕುಂಜೂರುಪಂಜ ಒಕ್ಕೂಟದ 3 ಸಂಘಗಳಿಗೆ ಲಾಭoಶ ವಿತರಣೆ ಮಾಡಲಾಯಿತು. ಮೇಲ್ವಿಚಾರಕ ಪ್ರಶಾಂತ್, ಒಕ್ಕೂಟ ಕೋಶಾಧಿಕಾರಿ ಜಗದೀಶ್, ಕೃಷಿ ಮೇಲ್ವಿಚಾರಕ ಶಿವರಂಜನ್ ಉಪಸ್ಥಿತರಿದ್ದರು.
ವೀಣಾ ಪ್ರಾರ್ಥಿಸಿದರು. ಕುಂಜೂರುಪಂಜ ಸೇವಾಪ್ರತಿನಿಧಿ ಆಶಾ ಸ್ವಾಗತಿಸಿ, ಅಂಬಿಕಾ ಸಂಘದ ಲಲಿತ ವಂದಿಸಿದರು.