ಕರಾವಳಿಸ್ಥಳೀಯ

ಬೈಕ್‌ ಅಪಘಾತ: ಸವಾರ ಗಂಭೀರ!!

ಚಂದಳಿಕೆಯಲ್ಲಿ ಪಾದಚಾರಿಯೊಬ್ಬರ ಜೀವ ರಕ್ಷಣೆ ಮಾಡಲು ಹೋದ ಬೈಕ್‌ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಪ್ಪಳಿಸಿ ಗಂಬೀರ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಕಬಕ – ವಿಟ್ಲ ರಸ್ತೆಯ ಚಂದಳಿಕೆಯಲ್ಲಿ ಪಾದಚಾರಿಯೊಬ್ಬರ ಜೀವ ರಕ್ಷಣೆ ಮಾಡಲು ಹೋದ ಬೈಕ್‌ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಪ್ಪಳಿಸಿ ಗಂಬೀರ ಗಾಯಗೊಂಡಿದ್ದಾರೆ.

akshaya college

ಅರ್ಕೆಜಾರು ನಿವಾಸಿ ನಾಗೇಶ್ ಗೌಡ (35) ಗಾಯಗೊಂಡವರು. ಪಾದಾಚಾರಿ ಮಹಿಳೆಗೂ ತಲೆಗೆ ಗಾಯವಾಗಿದೆ. ವಿಟ್ಲ ಪೇಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ರಿಕ್ಷಾದಿಂದ ಇಳಿದ ಮಹಿಳೆಯೊಬ್ಬರು ಏಕಾ ಏಕಿ ರಸ್ತೆಯನ್ನು ದಾಟಲು ಮುಂದಾಗಿದ್ದಾರೆ. ಬೈಕ್ ಸವಾರ ಇವರನ್ನು ತಪ್ಪಿಸಲು ಮುಂದಾದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸವಾರನ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ರಸ್ತೆಯಲ್ಲಿ ಬಿದ್ದಿದ್ದವರನ್ನು ಸ್ಥಳೀಯರು ರಿಕ್ಷಾ ಮೂಲಕ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

ಸ್ಥಳಕ್ಕೆ 112 ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 132