ರಾಜ್ಯ ವಾರ್ತೆಸ್ಥಳೀಯ

ಶಾಲಾ ಮಕ್ಕಳ ಬಸ್ಸ್ ಪಂಚರ್ ತೆಗೆದ ಗಸ್ತು ಪೋಲಿಸರು

ಮಕ್ಕಳನ್ನು ಹೊತ್ತ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

ಈ ಸುದ್ದಿಯನ್ನು ಶೇರ್ ಮಾಡಿ

ಸಂಜೆ 5.30ರ ವೇಳೆಗೆ ಕುಮಟಾ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಮಕ್ಕಳನ್ನು ಹೊತ್ತು ಕತಗಾಲ ಮಾರ್ಗವಾಗಿ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

akshaya college

ಕತ್ತಲಾಗುವ ಮುನ್ನ ಮನೆ ಸೇರಬೇಕು ಎಂಬ ನಿಟ್ಟಿನಲ್ಲಿ ಮಕ್ಕಳು ಕಳವಳ ವ್ಯಕ್ತಪಡಿಸುತ್ತಿದ್ದರು.

ಅದೇ ಸಮಯಕ್ಕೆ ಶಿರಸಿ ಕುಮಟಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೈವೆ ಪೆಟ್ರೋಲ್‌ ಪೊಲೀಸರು ಚಾಲಕನ ಬಳಿ ಬಸ್ಸಿನ ಸಮಸ್ಯೆ ಆಲಿಸಿದರು. ಪೊಲೀಸ್ ಕಾನ್ಸೆಬಲ್ ಕಿರಣ ನಾಯ್ಕ ಸಮವಸ್ತ್ರದಲ್ಲಿಯೇ ಜಾಕ್ ಏರಿಸಿ, ಪಂಚರ್ ಆದ ಚಕ್ರ ತೆಗೆದರು. ಹೈವೇ ಪೆಟ್ರೋಲ್ ವಾಹನದ ಚಾಲಕ ದೇವಾನಂದ ನಾಯ್ಕ ಸಹ ಇನ್ನೊಂದು ಚಕ್ರ ತಂದು ಬಸ್ಸಿಗೆ ಜೋಡಿಸಿದರು. ಅಂದಾಜು 30 ನಿಮಿಷದ ನಂತರ ಬಸ್ಸು ಅಲ್ಲಿಂದ ಚಲಿಸಿ, ಮಕ್ಕಳನ್ನು ಮನೆಗೆ ಮುಟ್ಟಿಸಿತು. ಆ ಬಸ್ಸಿನಲ್ಲಿ ಅಂದಾಜು 20 ಮಕ್ಕಳಿದ್ದರು. ಹೆಬ್ಬೆಕಿಲ್ ಹಾಗೂ ಕತಗಾಲಗೆ ಅವರು ತೆರಳುವವರಿದ್ದರು. ಬಸ್ ಪಂಚರ್ ಆದ ಪರಿಣಾಮ ಒಂದು ತಾಸು ತಡವಾಗಿ ಮನೆಗೆ ಮುಟ್ಟಿದರು.

ಹೈವೆ ಪೆಟ್ರೋಲಿನವರು ಹಣ ಮಾಡಲು ಮಾತ್ರ ಸೀಮಿತ’ ಎಂದು ಕುಮಟಾ ಶಾಸಕ ದಿನಕರ ವಿಧಾನಸಭಾ ಅಧಿವೇಶನದಲ್ಲಿ ಗುಡುಗಿದ್ದು, ಅದಕ್ಕೆ ವಿರುದ್ಧವಾಗಿ ಮಕ್ಕಳ ಸೇವೆ ಮಾಡುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗಳಿಸಿದರು. `ಮಕ್ಕಳು ಇನ್ನೂ ಮನೆಗೆ ಬರಲಿಲ್ಲ’ ಎಂಬ ಪಾಲಕರ ಆತಂಕವನ್ನು ಪೊಲೀಸರು ದೂರ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

1 of 132